ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿಗೆ ರೋಚಕ ಗೆಲುವಿನ ಆರಂಭ!

| Published : Feb 25 2024, 01:45 AM IST

ಸಾರಾಂಶ

ಬ್ಯಾಟಿಂಗ್‌ನಲ್ಲಿ ರಿಚಾ ಘೋಷ್‌ ಅಬ್ಬರ ಹಾಗೂ ಬೌಲಿಂಗ್‌ನಲ್ಲಿ ಶೋಭನಾ ಆಶಾ ಸಂಘಟಿಸಿದ ಮಾರಕ ದಾಳಿ ಆರ್‌ಸಿಬಿಗೆ ಗೆಲುವಿನ ಆರಂಭ ಒದಗಿಸಿಕೊಟ್ಟಿದೆ. ಇದರೊಂದಿಗೆ ಕಳೆದ ಆವೃತ್ತಿಯ ಕಳಪೆ ಆಟವನ್ನು ಮರೆತು ಈ ಬಾರಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹುಟ್ಟುಹಾಕಿದೆ.

ಬೆಂಗಳೂರು: ಶೋಭನಾ ಆಶಾ ಮಾರಕ ದಾಳಿಯಿಂದಾಗಿ 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಗೆಲುವಿನ ಆರಂಭ ಪಡೆದಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್‌ ವಿರುದ್ಧ 2 ರನ್‌ ರೋಚಕ ಗೆಲುವು ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು ರಿಚಾ ಘೋಷ್‌ ಹಾಗೂ ಶಬ್ಬಿನೇನಿ ಮೇಘನಾ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 157 ರನ್‌ ಕಲೆಹಾಕಿತು. ನಾಯಕಿ ಸ್ಮೃತಿ ಮಂಧನಾ(13), ಸೋಫಿ ಡಿವೈನ್(01), ಎಲೈಸ್‌ ಪೆರ್ರಿ(08) ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು. ಆದರೆ ಮೇಘನಾ 53 ಹಾಗೂ ರಿಚಾ 37 ಎಸೆತಗಳಲ್ಲಿ 62 ರನ್‌ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆ ಎಸೆತದಲ್ಲಿ 5 ರನ್‌ ಬೇಕಿದ್ದಾಗ ಆರ್‌ಸಿಬಿ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು. ಗ್ರೇಸ್‌ ಹ್ಯಾರಿಸ್‌ 38, ಶ್ವೇತಾ ಶೆರಾವತ್‌ 31 ರನ್‌ ಗಳಿಸಿದರು. ಶೋಭನಾ 22 ರನ್‌ಗೆ 5 ವಿಕೆಟ್‌ ಕಿತ್ತರು.ಇಂದಿನ ಪಂದ್ಯ: ಗುಜರಾತ್‌-ಮುಂಬೈ ಇಂಡಿಯನ್ಸ್