ಸಾರಾಂಶ
ಒಎಸ್‌ಕೆ ಫೆಡೆರೇಷನ್ ಆಫ್ ಇಂಡಿಯಾ ನಗರದ ಬನಶಂಕರಿ ಬಳಿಯಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ರಿಪಬ್ಲಿಕ್ ಡೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ತೆರೆ ಕಂಡಿತು.
ಬೆಂಗಳೂರು: ದೇಶದ ಅತಿದೊಡ್ಡ ಕರಾಟೆ ಶಾಲೆ ಒಎಸ್‌ಕೆ ಫೆಡೆರೇಷನ್ ಆಫ್ ಇಂಡಿಯಾ ನಗರದ ಬನಶಂಕರಿ ಬಳಿಯಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ರಿಪಬ್ಲಿಕ್ ಡೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ತೆರೆ ಕಂಡಿತು. 26ರಂದು ಆರಂಭವಾದ ಕರಾಟೆ ಟೂರ್ನಮೆಂಟ್‌ನಲ್ಲಿ ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಶ್ರೀಲಂಕಾ ಸೇರಿದಂತೆ ಹಲವು ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದು, ಮೊದಲ ದಿನ ರಾಜ್ಯ ಸ್ಪರ್ಧಾಳುಗಳು ಮೇಲುಗೈ ಸಾಧಿಸಿದ್ದರು.
ಮಿಸ್ ಜಪಾನ್ ಖ್ಯಾತಿಯ ನವೋಕಾ ಓಹಾರಾ, ಅಲ್ಲದೇ, ವಿಶ್ವ ಕರಾಟೆ ಫೆಡೆರೇಷನ್ ಜಡ್ಜ್ ಶಿವದಾಸ್, ಒಎಸ್‌ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುರೇಶ್ ಕೆನಿಚಿರಾ ಸೇರಿದಂತೆ 100ಕ್ಕೂ ಹೆಚ್ಚು ಅಧಿಕಾರಿಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು.