ಸಾರಾಂಶ
ಗ್ವಾಲಿಯರ್‌ನಲ್ಲಿ 2010ರ ಬಳಿಕ ನಡೆಯಲಿದೆ ಅಂತಾರಾಷ್ಟ್ರೀಯ ಪಂದ್ಯ. ಸಚಿನ್ ತೆಂಡುಲ್ಕರ್ 200 ರನ್ ಗಳಿಸಿದ್ದೇ ಮಧ್ಯಪ್ರದೇಶದ ಈ ನಗರದಲ್ಲಿ ನಡೆದ ಕೊನೆಯ ಪಂದ್ಯ.
ನವದೆಹಲಿ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಬಿಸಿಸಿಐ ಗ್ವಾಲಿಯರ್‌ಗೆ ಸ್ಥಳಾಂತರಿಸಿದೆ.
ಅ.6ರಂದು ನಡೆಯಬೇಕಿರುವ ಪಂದ್ಯ ಧರ್ಮಶಾಲಾದಲ್ಲಿ ನಿಗದಿಯಾಗಿತ್ತು. ಆದರೆ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಧರ್ಮಶಾಲಾ ಮೈದಾನದ ಔಟ್‌ಫೀಲ್ಡ್ ರಿಪೇರಿ ಕಾರ್ಯವನ್ನು ಇನ್ನೂ ಪೂರ್ತಿಗೊಳಿಸದ ಕಾರಣ, ಪಂದ್ಯವನ್ನು ಸ್ಥಳಾಂತರಿಸಲಾಗಿದೆ.2010ರ ಬಳಿಕ ಗ್ವಾಲಿಯರ್‌ನಲ್ಲಿ ಮೊದಲ ಬಾರಿಗೆ ಅಂ.ರಾ. ಪಂದ್ಯ ನಡೆಯಲಿದೆ. ಕೊನೆ ಬಾರಿಗೆ ಇಲ್ಲಿ ಅಂ.ರಾ. ಪಂದ್ಯ ನಡೆದಾಗ ಸಚಿನ್ ತೆಂಡುಲ್ಕರ್, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ್ದರು. ಇನ್ನು ಹೊಸದಾಗಿ ನಿರ್ಮಾಣಗೊಂಡಿರುವ ಮಾಧವ್‌ರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಇದು ಮೊದಲ ಪಂದ್ಯ ಎನಿಸಿದೆ.ಲಂಕಾ ಕ್ರಿಕೆಟ್ ತಂಡಕ್ಕೆ ಬೆಲ್ ಬ್ಯಾಟಿಂಗ್ ಕೋಚ್
ಕೊಲೊಂಬೊ: ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಶ್ರೀಲಂಕಾ ಕ್ರಿಕೆಟ್ ತಂಡ, ಆ ಸರಣಿಗೆ ತನ್ನ ಬ್ಯಾಟಿಂಗ್ ಕೋಚ್ ಆಗಿ ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಇಯಾನ್ ಬೆಲ್‌ರನ್ನು ನೇಮಕ ಮಾಡಿಕೊಂಡಿದೆ. 118 ಟೆಸ್ಟ್‌ಗಳಲ್ಲಿ 7727 ರನ್ ಕಲೆಹಾಕಿರುವ ಬೆಲ್, ಆ.16ರಿಂದ ಲಂಕಾ ತಂಡದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಆ.21ರಿಂದ ಮೊದಲ ಟೆಸ್ಟ್ ನಡೆಯಲಿದೆ.