ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ, ಪ್ರತಿಷ್ಠಿತ ಲಾರೆಸ್‌ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ರಿಷಭ್‌ ಪಂತ್‌

| N/A | Published : Mar 04 2025, 12:34 AM IST / Updated: Mar 04 2025, 04:15 AM IST

ಸಾರಾಂಶ

ವರ್ಷದ ಶ್ರೇಷ್ಠ ಕಮ್‌ಬ್ಯಾಕ್‌ ಪ್ರಶಸ್ತಿಗೆ ರಿಷಭ್‌ ಪಂತ್‌ ಹೆಸರು ನಾಮನಿರ್ದೇಶನ. ಏ.21ರಂದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಘೋಷಣೆ ಹಾಗೂ ಪ್ರದಾನ.

ನವದೆಹಲಿ: ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ, ಪ್ರತಿಷ್ಠಿತ ಲಾರೆಸ್‌ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್‌ ಪಂತ್‌ ಸ್ಥಾನ ಪಡೆದಿದ್ದಾರೆ.

2024ನೇ ಸಾಲಿನ ‘ವರ್ಷದ ಶ್ರೇಷ್ಠ ಕಮ್‌ಬ್ಯಾಕ್‌’ ಪ್ರಶಸ್ತಿ ವಿಭಾಗದಲ್ಲಿ ಪಂತ್‌ ಹೆಸರು ನಾಮ ನಿರ್ದೇಶನಗೊಂಡಿದೆ. 2022ರ ಡಿಸೆಂಬರ್‌ನಲ್ಲಿ ಪಂತ್‌ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

ಹಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಪಂತ್‌, ಆನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿ 2024ರಲ್ಲಿ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.

ಪಂತ್‌ ಜೊತೆ ಬ್ರೆಜಿಲ್‌ನ ಜಿಮ್ನಾಸ್ಟಿಕ್‌ ಪಟು ರೆಬೆಕಾ ಆ್ಯಂಡ್ರಾಡೆ, ಆಸ್ಟ್ರೇಲಿಯಾದ ಈಜುಪಟು ಆರಿಯಾರ್ನೆ ಟಿಟ್ಮಸ್‌, ಸ್ವಿಟ್ಜರ್‌ಲೆಂಡ್‌ನ ಸ್ಕೀ-ರೇಸರ್‌ ಲಾರಾ ಬೆಹ್ರಾಮಿ, ಅಮೆರಿಕದ ಈಜುಪಟು ಕಾಲಿಬ್‌ ಡ್ರೆಸ್ಸೆಲ್‌, ಸ್ಪೇನ್‌ನ ಮೋಟೋ ಜಿಪಿ ಚಾಲಕ ಮಾರ್ಕ್‌ ಮಾರ್ಕೆಝ್‌ ಸ್ಪರ್ಧೆಯಲ್ಲಿ ಇದ್ದಾರೆ. ಏ.21ರಂದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಪ್ರಶಸ್ತಿ ಘೋಷಣೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ.