ಐಪಿಎಲ್‌ನಲ್ಲಿ ಬ್ಯಾಟರ್‌ ಆಗಿ ಕಣಕ್ಕಿಳಿಯಲಿರುವ ರಿಷಭ್‌ ಪಂತ್‌ !

| Published : Feb 21 2024, 02:05 AM IST / Updated: Feb 21 2024, 12:09 PM IST

ಸಾರಾಂಶ

ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ 17ನೇ ಆವೃತ್ತಿ ಐಪಿಎಲ್‌ ವೇಳೆಗೆ ಆಡಲು ಫಿಟ್‌ ಆಗಲಿದ್ದಾರೆ.

ಬೆಂಗಳೂರು: ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ 17ನೇ ಆವೃತ್ತಿ ಐಪಿಎಲ್‌ ವೇಳೆಗೆ ಆಡಲು ಫಿಟ್‌ ಆಗಲಿದ್ದಾರೆ. ಆದರೆ ಕೇವಲ ಬ್ಯಾಟರ್‌ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

2022ರ ಡಿಸೆಂಬರ್‌ನಲ್ಲಿ ಅಪಘಾತಕ್ಕೀಡಾದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿದಿರುವ ರಿಷಭ್‌ ಸದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 

ಅವರು ಈ ಬಾರಿ ಐಪಿಎಲ್‌ನಲ್ಲಿ ಆಡಲಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 

ಆದರೆ ಶೇ.100ರಷ್ಟು ಫಿಟ್‌ ಅಲ್ಲದ ಕಾರಣ ವಿಕೆಟ್‌ ಕೀಪಿಂಗ್‌ ಮಾಡುವಷ್ಟು ಸಮರ್ಥರಾಗಿಲ್ಲ. ಹೀಗಾಗಿ ಕೇವಲ ಬ್ಯಾಟರ್‌ ಆಗಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.