ಸನ್‌ರೈಸರ್ಸ್‌ ಆರ್ಭಟಕ್ಕೆ ಬ್ರೇಕ್‌ ಹಾಕುತ್ತಾ ಡೆಲ್ಲಿ?

| Published : Apr 20 2024, 01:00 AM IST / Updated: Apr 20 2024, 04:20 AM IST

ಸಾರಾಂಶ

ಡೆಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿದು ಟೂರ್ನಿಯ ಮೊದಲ ಪಂದ್ಯ. ಗೆಲುವಿನ ಓಟ ಮುಂದುವರಿಸಲು ಇತ್ತಂಡಗಳ ಕಾತರ. ತವರಲ್ಲಿ ಗೆಲ್ಲಲು ಡೆಲ್ಲಿ ಮಾಸ್ಟರ್‌ಪ್ಲ್ಯಾನ್‌.

ಡೆಲ್ಲಿ: ತನ್ನ ಸ್ಫೋಟಕ ಬ್ಯಾಟಿಂಗ್‌, ರನ್‌ ದಾಖಲೆಗಳ ಸುರಿಮಳೆ ಮೂಲಕವೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಡಲಿದ್ದು, ಮತ್ತೊಂದು ಗೆಲುವಿನ ಕಾತರದಲ್ಲಿದೆ. 

ಆದರೆ ಸನ್‌ರೈಸರ್ಸ್‌ನ ಆರ್ಭಟಕ್ಕೆ ತವರಿನಲ್ಲೇ ಕಡಿವಾಣ ಹಾಕಲು ಡೆಲ್ಲಿ ತಂಡ ಕಾಯುತ್ತಿದೆ.ಹೈದರಾಬಾದ್‌ ಆಡಿರುವ 6ರಲ್ಲಿ 4 ಪಂದ್ಯ ಗೆದ್ದಿದ್ದು, ಕಳೆದ 3 ಪಂದ್ಯಗಳಲ್ಲೂ ಜಯಗಳಿಸಿದೆ. ಸ್ಫೋಟಕ ಬ್ಯಾಟರ್‌ಗಳಾದ ಟ್ರ್ಯಾವಿಸ್‌ ಹೆಡ್‌, ಕ್ಲಾಸೆನ್‌, ಮಾರ್ಕ್‌ರಮ್‌, ಅಭಿಷೇಕ್‌ ಶರ್ಮಾ ತಂಡದ ಟ್ರಂಪ್‌ಕಾರ್ಡ್ಸ್‌. ಇವರು ಅಬ್ಬರಿಸಲು ಶುರುವಿಟ್ಟರೆ ಕಡಿವಾಣ ಹಾಕುವುದು ಕಷ್ಟ ಎಂಬ ಅರಿವು ಡೆಲ್ಲಿಗಿದ್ದು, ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. 

ಆದರೆ ಸನ್‌ರೈಸರ್ಸ್‌ನ ಬೌಲಿಂಗ್‌ ವಿಭಾಗ ದುಬಾರಿಯಾಗುತ್ತಿದ್ದು, ಸುಧಾರಿತ ಪ್ರದರ್ಶನದ ಅಗತ್ಯವಿದೆ.ಅತ್ತ ಡೆಲ್ಲಿ 7 ಪಂದ್ಯಗಲ್ಲಿ 3ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ ಹಾದಿ ಸುಗಮಗೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ತಂಡ ಟೂರ್ನಿಯಲ್ಲಿ ಮೊದಲ ಬಾರಿ ತವರಿನ ಡೆಲ್ಲಿ ಕ್ರೀಡಾಂಗಣದಲ್ಲಿ ಆಡಲು ಸಜ್ಜಾಗಿದೆ. ಟೂರ್ನಿಯಲ್ಲಿ ಡೆಲ್ಲಿ ಸಾಧಾರಣ ಪ್ರದರ್ಶನ ತೋರುತ್ತಿದ್ದರೂ, ಚೆನ್ನೈ ಹಾಗೂ ಗುಜರಾತ್ ವಿರುದ್ಧದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಒಟ್ಟು ಮುಖಾಮುಖಿ: 23ಡೆಲ್ಲಿ: 11ಹೈದ್ರಾಬಾದ್‌: 12

ಸಂಭವನೀಯ ಆಟಗಾರರ ಪಟ್ಟಿಡೆಲ್ಲಿ: ಪೃಥ್ವಿ ಶಾ, ಜೇಕ್‌ ಫ್ರೇಸರ್‌, ಟ್ರಿಸ್ಟನ್‌ ಸ್ಟಬ್ಸ್‌, ಹೋಪ್‌, ರಿಷಭ್(ನಾಯಕ), ಅಕ್ಷರ್‌, ಸುಮಿತ್‌, ಕುಲ್ದೀಪ್‌, ಇಶಾಂತ್‌, ಮುಕೇಶ್‌, ಖಲೀಲ್‌. ಹೈದ್ರಾಬಾದ್‌: ಹೆಡ್‌, ಅಭಿಷೇಕ್‌, ಏಡನ್‌, ಕ್ಲಾಸೆನ್‌, ನಿತೀಶ್‌, ಸಮದ್‌, ಶಾಬಾಜ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ಉನಾದ್ಕಟ್‌, ನಟರಾಜನ್‌.

ಪಂದ್ಯ: ಸಂಂಜೆ 7.30ಕ್ಕೆ