ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ರೋಹನ್‌ ಬೋಪಣ್ಣ

| Published : Feb 03 2024, 01:51 AM IST

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ರೋಹನ್‌ ಬೋಪಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಅಗ್ರಗಣ್ಯ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಬೋಪಣ್ಣ ತಮ್ಮ ರ್‍ಯಾಕೆಟ್‌ಅನ್ನು ಪ್ರಧಾನಿಗೆ ಹಸ್ತಾಂತರಿಸಿದರು.

ನವದೆಹಲಿ: ಭಾರತದ ಅಗ್ರಗಣ್ಯ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಬೋಪಣ್ಣ ತಮ್ಮ ರ್‍ಯಾಕೆಟ್‌ಅನ್ನು ಪ್ರಧಾನಿಗೆ ಹಸ್ತಾಂತರಿಸಿದರು. ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಡಬಲ್ಸ್‌ ಟ್ರೋಫಿಯನ್ನೂ ಪ್ರಧಾನಿಗೆ ತೋರಿಸಿ ಖುಷಿಪಟ್ಟರು. ಡಬಲ್ಸ್‌ನಲ್ಲಿ ವಿಶ್ವ ನಂ.1 ಹಾಗೂ ಗ್ರ್ಯಾನ್‌ಸ್ಲಾಂ ಸಾಧನೆಗಳಿಗೆ ಬೋಪಣ್ಣರಿಗೆ ಅಭಿನಂದಿಸಿದ ಮೋದಿ, ಕನ್ನಡಿಗನ ಭವಿಷ್ಯಕ್ಕೆ ಶುಭ ಹಾರೈಸಿದರು. ಪ್ರಧಾನಿ ಜೊತೆಗಿನ ಭೇಟಿಯ ಫೋಟೋಗಳನ್ನು ಬೋಪಣ್ಣ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಟೆಸ್ಟ್‌: ಆಫ್ಘನ್‌ ಮೇಲೆ

ಶ್ರೀಲಂಕಾ ಪ್ರಾಬಲ್ಯ

ಕೊಲಂಬೊ: ರಹಮತ್‌ ಶಾ ಹೋರಾಟದ ಹೊರತಾಗಿಯೂ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಫ್ಘಾನಿಸ್ತಾನ ಕೇವಲ 198ಕ್ಕೆ ಆಲೌಟಾಗಿದೆ. ಇತರೆಲ್ಲಾ ಬ್ಯಾಟರ್‌ಗಳು ಲಂಕಾ ಬೌಲರ್‌ಗಳನ್ನು ಎದುರಿಸಲು ಪರದಾಡಿದರೆ ಏಕಾಂಗಿ ಹೋರಾಟ ಪ್ರದರ್ಶಿಸಿದ ರಹಮತ್‌ 91 ರನ್‌ ಸಿಡಿಸಿದರು. ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಲಂಕಾ ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 80 ರನ್‌ ಕಲೆಹಾಕಿದೆ. ತಂಡ ಇನ್ನು 118 ರನ್‌ ಹಿನ್ನಡೆಯಲ್ಲಿದೆ. ದಿಮುತ್‌ ಕರುಣಾರತ್ನೆ ಔಟಾಗದೆ 41, ನಿಶಾನ್‌ ಮದುಶಂಕ ಔಟಾಗದೆ 36 ರನ್‌ ಸಿಡಿಸಿದ್ದಾರೆ.