ಬೇಡ ಎಂದರೂ ರೆಕಾರ್ಡ್‌ ಮಾಡಿದ್ದಕ್ಕೆ ಸ್ಟಾರ್‌ಸ್ಪೋರ್ಟ್‌ ವಿರುದ್ಧ ರೋಹಿತ್ ಆಕ್ರೋಶ

| Published : May 20 2024, 01:30 AM IST / Updated: May 20 2024, 04:41 AM IST

ಬೇಡ ಎಂದರೂ ರೆಕಾರ್ಡ್‌ ಮಾಡಿದ್ದಕ್ಕೆ ಸ್ಟಾರ್‌ಸ್ಪೋರ್ಟ್‌ ವಿರುದ್ಧ ರೋಹಿತ್ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈ ತಂಡದಲ್ಲಿ ತಮ್ಮ ಭವಿಷ್ಯದ ಬಗ್ಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು.

ನವದೆಹಲಿ: ತಾವು ಬೇಡ ಎಂದರೂ ತಮ್ಮ ಮಾತುಗಳನ್ನು ರೆಕಾರ್ಡ್‌ ಮಾಡಿದ್ದಕ್ಕೆ ಐಪಿಎಲ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ ಕಿಡಿಕಾರಿದ್ದು, ಇದರಿಂದ ತಮ್ಮ ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದಿದ್ದಾರೆ.

 ಇತ್ತೀಚೆಗೆ ರೋಹಿತ್‌ ಅವರು ಮುಂಬೈ ಇಂಡಿಯನ್ಸ್‌ ತಂಡದಲ್ಲಿ ತಮ್ಮ ಭವಿಷ್ಯದ ಬಗ್ಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು. 

ಈ ಬಗ್ಗೆ ಭಾನುವಾರ ‘ಎಕ್ಸ್‌’ ಖಾತೆಯಲ್ಲಿ ಕಿಡಿಕಾರಿರುವ ರೋಹಿತ್‌ ಶರ್ಮಾ ಅವರು, ‘ಸ್ನೇಹಿತರು, ಸಹ ಆಟಗಾರರೊಂದಿಗೆ ಪಂದ್ಯ, ತರಬೇತಿ ವೇಳೆ ಖಾಸಗಿಯಾಗಿ ನಡೆಸುವ ಸಂಭಾಷಣೆಗಳನ್ನೂ ಚಿತ್ರೀಕರಿಸಲಾಗುತ್ತಿದೆ. ಸಂಭಾಷಣೆ ರೆಕಾರ್ಡ್‌ ಮಾಡದಂತೆ ಸ್ಟಾರ್‌ಸ್ಪೋರ್ಟ್ಸ್‌ಗೆ ತಿಳಿಸಿದ್ದರೂ ಗೌಪ್ಯತೆಗೆ ಧಕ್ಕೆ ತಂದಿದ್ದಾರೆ’ ಎಂದಿದ್ದಾರೆ.

ಅಭಿಷೇಕ್‌ ನಾಯರ್‌ ಜೊತೆಗಿನ ರೋಹಿತ್‌ರ ಸಂಭಾಷಣೆಯ ವಿಡಿಯೋವನ್ನು ಕೆಕೆಆರ್‌ ಕೂಡಾ ಸಾಮಾಜಿಕ ತಾಣದಲ್ಲೂ ಹಂಚಿಕೊಂಡಿತ್ತು. ವಿವಾದವಾಗುತ್ತಿದ್ದಂತೆಯೇ ಆ ವಿಡಿಯೋ ಅಳಿಸಲಾಗಿತ್ತು. ಬಳಿಕ ಕೆಕೆಆರ್‌ ತಂಡದ ಯುವ ಆಟಗಾರರೊಂದಿಗೆ ಸಂಭಾಷಣೆ ನಡೆಸುತ್ತಿದ್ದಾಗ ಪ್ರಸಾರಕರೊಂದಿಗೆ ರೆಕಾರ್ಡ್ ಮಾಡದಂತೆ ರೋಹಿತ್‌ ಶರ್ಮಾ ಕೈಮುಗಿದು ಕೇಳಿಕೊಂಡಿದ್ದರು. ಈಗಾಗಲೇ ಒಂದು ಆಡಿಯೋ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮತ್ತೊಮ್ಮೆ ಆಡಿಯೋ ರೆಕಾರ್ಡ್‌ ಮಾಡಬೇಡಿ ಎಂದಿದ್ದರು.