ಕೇವಲ 13 ರನ್‌ ಗಳಿಸಿದ್ರೂ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರೋಹಿತ್‌

| Published : Jun 10 2024, 12:33 AM IST / Updated: Jun 10 2024, 04:39 AM IST

ಸಾರಾಂಶ

ಏಕದಿನ ಹಾಗೂ ಅಂ.ರಾ. ಟಿ20ಯಲ್ಲಿ ಪಾಕಿಸ್ತಾನಿ ವೇಗಿ ಶಾಹೀನ್‌ ಅಫ್ರಿದಿ ಬೌಲಿಂಗ್‌ನ ಮೊದಲ ಓವರಲ್ಲಿ ಸಿಕ್ಸರ್‌ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್‌ ಎನ್ನುವ ಹಿರಿಮೆಗೆ ರೋಹಿತ್‌ ಶರ್ಮಾ ಪಾತ್ರರಾಗಿದ್ದಾರೆ.

ನ್ಯೂಯಾರ್ಕ್‌: ಏಕದಿನ ಹಾಗೂ ಅಂ.ರಾ. ಟಿ20ಯಲ್ಲಿ ಪಾಕಿಸ್ತಾನಿ ವೇಗಿ ಶಾಹೀನ್‌ ಅಫ್ರಿದಿ ಬೌಲಿಂಗ್‌ನ ಮೊದಲ ಓವರಲ್ಲಿ ಸಿಕ್ಸರ್‌ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್‌ ಎನ್ನುವ ಹಿರಿಮೆಗೆ ರೋಹಿತ್‌ ಶರ್ಮಾ ಪಾತ್ರರಾಗಿದ್ದಾರೆ. 

ಭಾನುವಾರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಶಾಹೀನ್‌ ಎಸೆದ ಇನ್ನಿಂಗ್ಸ್‌ನ ಮೊದಲ ಓವರ್‌ನ 3ನೇ ಎಸೆತವನ್ನು ರೋಹಿತ್‌ ಸಿಕ್ಸರ್‌ಗಟ್ಟಿದರು. 2023ರಲ್ಲಿ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಏಷ್ಯಾಕಪ್‌ ಏಕದಿನ ಟೂರ್ನಿಯ ಪಂದ್ಯದಲ್ಲಿ ರೋಹಿತ್‌, ಶಾಹೀನ್‌ರ ಮೊದಲ ಓವರಲ್ಲಿ ಸಿಕ್ಸರ್‌ ಸಿಡಿಸಿದ್ದರು.

ಭಾರತ-ಪಾಕ್‌ ಕ್ರಿಕೆಟ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ 12ನೇ ರಾಷ್ಟ್ರ ಅಮೆರಿಕ!

ಅಮೆರಿಕ, ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ 12ನೇ ರಾಷ್ಟ್ರ ಎನಿಸಿತು. ಇದಕ್ಕೂ ಮುನ್ನ 1952ರಲ್ಲಿ ಭಾರತದಲ್ಲಿ ಉಭಯ ದೇಶಗಳ ತಂಡಗಳ ನಡುವೆ ಮೊದಲ ಪಂದ್ಯ ನಡೆದಿತ್ತು. 1955ರಲ್ಲಿ ಪಾಕಿಸ್ತಾನ, 1984ರಲ್ಲಿ ಯುಎಇ, 1985ರಲ್ಲಿ ಆಸ್ಟ್ರೇಲಿಯಾ, 1988ರಲ್ಲಿ ಬಾಂಗ್ಲಾದೇಶ, 1996ರಲ್ಲಿ ಸಿಂಗಾಪುರ, 1996ರಲ್ಲಿ ಕೆನಡಾ, 1997ರಲ್ಲಿ ಶ್ರೀಲಂಕಾ, 1999ರಲ್ಲಿ ಇಂಗ್ಲೆಂಡ್‌, 2003ರಲ್ಲಿ ದಕ್ಷಿಣ ಆಫ್ರಿಕಾ, 2004ರಲ್ಲಿ ನೆದರ್‌ಲೆಂಡ್ಸ್‌ ಮೊದಲ ಸಲ ಆತಿಥ್ಯ ನೀಡಿದ್ದವು. 20 ವರ್ಷಗಳ ಬಳಿಕ ಹೊಸ ದೇಶದಲ್ಲಿ ಭಾರತ-ಪಾಕ್‌ ಪಂದ್ಯ ನಡೆದಿದೆ.