ಕ್ರೀಡಾಂಗಣಕ್ಕೇ ಹೋಗಿ ವಿರಾಟ್‌, ರೋಹಿತ್‌, ಆಜಂ ಅಟೋಗ್ರಾಫ್‌ ಪಡೆದ ಗೇಲ್‌

| Published : Jun 10 2024, 12:32 AM IST / Updated: Jun 10 2024, 04:40 AM IST

ಕ್ರೀಡಾಂಗಣಕ್ಕೇ ಹೋಗಿ ವಿರಾಟ್‌, ರೋಹಿತ್‌, ಆಜಂ ಅಟೋಗ್ರಾಫ್‌ ಪಡೆದ ಗೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಗೇಲ್‌ ಧರಿಸಿದ್ದ ಕೋಟ್‌ನ ಒಂದು ಬದಿಯಲ್ಲಿ ಭಾರತದ ತ್ರಿವರ್ಣ ಧ್ವಜ, ಮತ್ತೊಂದು ಕಡೆ ಪಾಕ್‌ ಧ್ವಜದ ಬಣ್ಣ ಎಲ್ಲರ ಗಮನ ಸೆಳೆಯಿತು. ಆಟಗಾರರಿಂದ ಕೋಟ್‌ ಮೇಲೆಯೇ ಸಹಿ ಹಾಕಿಸಿಕೊಂಡರು.

ನ್ಯೂಯಾರ್ಕ್‌: ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭದಕ್ಕೂ ಮುನ್ನ ವಿಶೇಷ ಧಿರಿಸಿನೊಂದಿಗೆ ಕ್ರೀಡಾಂಗಣಕ್ಕೆ ಬಂದ ವೆಸ್ಟ್‌ಇಂಡೀಸ್‌ ದಿಗ್ಗಜ ಕ್ರಿಕೆಟಿಗ ಕ್ರಿಸ್‌ ಗೇಲ್‌ ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಪಾಕಿಸ್ತಾನ ನಾಯಕ ಬಾಬರ್ ಆಜಂ ಅವರಿಂದ ಅಟೋಗ್ರಾಫ್‌ ಪಡೆದರು. 

ತಾವು ಧರಿಸಿದ್ದ ಕೋಟ್‌ನ ಒಂದು ಬದಿಯಲ್ಲಿ ಭಾರತದ ತ್ರಿವರ್ಣ ಧ್ವಜ, ಮತ್ತೊಂದು ಕಡೆ ಪಾಕ್‌ ಧ್ವಜದ ಬಣ್ಣ ಎಲ್ಲರ ಗಮನ ಸೆಳೆಯಿತು. ಆಟಗಾರರಿಂದ ಕೋಟ್‌ ಮೇಲೆಯೇ ಸಹಿ ಹಾಕಿಸಿಕೊಂಡರು. ಬಳಿಕ ಕೊಹ್ಲಿ, ರಿಷಭ್‌ ಪಂತ್‌, ಚಹಲ್‌, ಹಾರ್ದಿಕ್‌ ಪಾಂಡ್ಯ ಜೊತೆ ಗೇಲ್‌ ಫುಟ್ಬಾಲ್‌ ಆಡಿದರು.

ಹೈವೋಲ್ಟೇಜ್‌ ಭಾರತ-ಪಾಕ್‌ ಸಮರಕ್ಕೆ ಮಳೆ

ನ್ಯೂಯಾರ್ಕ್‌: ಭಾನುವಾರ ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯಕ್ಕೆ ಪದೇಪದೇ ಮಳೆ ಅಡ್ಡಿಪಡಿಸಿತು.

ಕ್ರೀಡಾಂಗಣದ ಸುತ್ತಮುತ್ತ ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿಯುತ್ತಿದ್ದ ಕಾರಣ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ನಡೆಯಬೇಕಿದ್ದ ಟಾಸ್‌ ಅರ್ಧ ಗಂಟೆ ವಿಳಂಬವಾಯಿತು. ಭಾರತ ಬ್ಯಾಟಿಂಗ್‌ ಆರಂಭಿಸಿ 1 ಓವರ್‌ ಪೂರ್ಣಗೊಳ್ಳುವಾಗಲೇ ಮತ್ತೆ ಸುರಿದ ಮಳೆ ಪಂದ್ಯವನ್ನು 40 ನಿಮಿಷಗಳ ಕಾಲ ಸ್ಥಗಿತಗೊಳಿಸಿತು. ಬಳಿಕ ರಾತ್ರಿ 9.30ಕ್ಕೆ ಪಂದ್ಯ ಪುನಾರಂಭಗೊಂಡಿತು. ಮಳೆ ನಡುವೆಯೂ ಕ್ರೀಡಾಂಗಣ ಪ್ರೇಕ್ಷಕರಿಂದ ತುಂಬಿ ತುಳುಕಿತ್ತು.