ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಮತ್ತೊಂದು ದಾಖಲೆ ಬರೆದಿದೆ. ಮುಂಬೈನ ಐಕಾನಿಕ್‌ ಕ್ರೀಡಾಂಗಣ ಎನಿಸಿಕೊಂಡಿರುವ ವಾಂಖೆಡೆಯಲ್ಲಿ ಐಪಿಎಲ್‌ನ ಗರಿಷ್ಠ ಸ್ಕೋರ್‌ ದಾಖಲಿಸಿದ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಮುಂಬೈ: ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಮತ್ತೊಂದು ದಾಖಲೆ ಬರೆದಿದೆ. ಮುಂಬೈನ ಐಕಾನಿಕ್‌ ಕ್ರೀಡಾಂಗಣ ಎನಿಸಿಕೊಂಡಿರುವ ವಾಂಖೆಡೆಯಲ್ಲಿ ಐಪಿಎಲ್‌ನ ಗರಿಷ್ಠ ಸ್ಕೋರ್‌ ದಾಖಲಿಸಿದ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಭಾನುವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ 4 ವಿಕೆಟ್‌ ನಷ್ಟದಲ್ಲಿ 240 ರನ್‌ ಗಳಿಸಿತು. ಈ ಹಿಂದೆ 2015ರಲ್ಲಿ ಮುಂಬೈ ವಿರುದ್ಧವೇ 1 ವಿಕೆಟ್‌ಗೆ 235 ರನ್‌ ಕಲೆಹಾಕಿದ್ದು ಈ ಕ್ರೀಡಾಂಗಣದಲ್ಲಿ ದಾಖಲಾದ ಗರಿಷ್ಠ ಸ್ಕೋರ್‌ ಎನಿಸಿಕೊಂಡಿತ್ತು. 2024ರಲ್ಲಿ ಡೆಲ್ಲಿ ವಿರುದ್ಧ ಮುಂಬೈ ಗಳಿಸಿದ 234 ರನ್‌ ದಾಖಲೆ ಈಗ 3ನೇ ಸ್ಥಾನಕ್ಕೆ ಕುಸಿದಿದೆ.

ಸತತ 4ನೇ 200+:

ಆರ್‌ಸಿಬಿ ತಂಡ ಈ ಬಾರಿ ಸತತ 4ನೇ ಪಂದ್ಯದಲ್ಲೂ 200+ ರನ್‌ ಕಲೆಹಾಕಿತು. ಸನ್‌ರೈಸರ್ಸ್‌ ವಿರುದ್ಧ ಬೆಂಗಳೂರಿನಲ್ಲಿ 202 ರನ್‌ ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿದ್ದ ಆರ್‌ಸಿಬಿ, ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ 3 ವಿಕೆಟ್‌ಗೆ 250 ರನ್‌ ಸೇರಿಸಿತ್ತು. ಬಳಿಕ ಗುವಾಹಟಿಯಲ್ಲಿ ರಾಜಸ್ಥಾನ ವಿರುದ್ಧ 8 ವಿಕೆಟ್‌ಗೆ 201 ರನ್‌ ಗಳಿಸಿತ್ತು.

ಸತತ 4ನೇ 200+

ರನ್‌: 2ನೇ ಗರಿಷ್ಠ

ಆರ್‌ಸಿಬಿ ಸತತ 4 ಬಾರಿ 200+ ರನ್‌ ಗಳಿಸಿದ್ದು ಐಪಿಎಲ್‌ನಲ್ಲಿ ಜಂಟಿ 2ನೇ ಗರಿಷ್ಠ. 2025-26ರಲ್ಲಿ ಸನ್‌ರೈಸರ್ಸ್‌ ತಂಡ ಸತತವಾಗಿ 5 ಬಾರಿ ಈ ಸಾಧನೆ ಮಾಡಿತ್ತು. ಇನ್ನು, 2023ರಲ್ಲಿ ಪಂಜಾಬ್‌, 2024ರಲ್ಲಿ ಆರ್‌ಸಿಬಿ ಸತತ 4 ಬಾರಿ 200+ ರನ್‌ ಗಳಿಸಿವೆ.

ರಜತ್‌ 17 ಎಸೆತಕ್ಕೆ

50: ಆರ್‌ಸಿಬಿ ಪರ

2ನೇ ವೇಗದ ಫಿಫ್ಟಿ

ರಜತ್‌ ಈ ಪಂದ್ಯದಲ್ಲಿ 17 ಎಸೆತಗಳಲ್ಲಿ 50 ರನ್‌ ಪೂರೈಸಿದರು. ಇದು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ದಾಖಲಾದ ಜಂಟಿ 2ನೇ ಅತಿ ವೇಗದ ಅರ್ಧಶತಕ. ರೊಮಾರಿಯೊ ಶೆಫರ್ಡ್‌ ಕಳೆದ ವರ್ಷ ಸಿಎಸ್‌ಕೆ ವಿರುದ್ಧ 14 ಎಸೆತಕ್ಕೆ ಅರ್ಧಶತಕ ಗಳಿಸಿದ್ದು ತಂಡದ ಪರ ದಾಖಲೆ. 2013ರಲ್ಲಿ ಪುಣೆ ವಿರುದ್ಧ ಕ್ರಿಸ್‌ ಗೇಲ್‌ 17 ಎಸೆತಕ್ಕೆ ಅರ್ಧಶತಕ ಪೂರೈಸಿದ್ದರು.

07ನೇ ಫಿಫ್ಟಿ

ಕೊಹ್ಲಿ ಐಪಿಎಲ್‌ನಲ್ಲಿ ಮುಂಬೈ ವಿರುದ್ಧ 7 ಬಾರಿ ಅರ್ಧಶತಕ ಬಾರಿಸಿದ್ದಾರೆ. ಇದು ಜಂಟಿ 2ನೇ ಗರಿಷ್ಠ. ಕೆ.ಎಲ್‌.ರಾಹುಲ್‌ ಮುಂಬೈ ವಿರುದ್ಧ 9 ಬಾರಿ ಈ ಸಾಧನೆ ಮಾಡಿದ್ದಾರೆ.