ರುಪೇ ಪ್ರೈಮ್ ವಾಲಿಬಾಲ್ ಲೀಗ್: ನಾಳೆ ಮುಂಬೈ ಮೆಟೆಯೋರ್ಸ್ - ಬೆಂಗಳೂರು ಟ್ರಾಪಿಡೋಸ್ ಹಣಾಹಣಿ

| Published : Feb 21 2024, 02:07 AM IST

ರುಪೇ ಪ್ರೈಮ್ ವಾಲಿಬಾಲ್ ಲೀಗ್: ನಾಳೆ ಮುಂಬೈ ಮೆಟೆಯೋರ್ಸ್ - ಬೆಂಗಳೂರು ಟ್ರಾಪಿಡೋಸ್ ಹಣಾಹಣಿ
Share this Article
  • FB
  • TW
  • Linkdin
  • Email

ಸಾರಾಂಶ

ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ನಾಳೆ ಬೆಂಗಳೂರು ಟ್ರಾಪಿಡೋಸ್ ಹಾಗೂ ಮುಂಬೈ ಮೆಟೆಯೋರ್ಸ್ ಮುಖಾಮುಖಿಯಾಗಲಿವೆ.

ಚೆನ್ನೈ: ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ನಾಳೆ ಬೆಂಗಳೂರು ಟ್ರಾಪಿಡೋಸ್ ಹಾಗೂ ಮುಂಬೈ ಮೆಟೆಯೋರ್ಸ್ ಮುಖಾಮುಖಿಯಾಗಲಿವೆ. ಪಂದ್ಯ ಸಂಜೆ 6.30 ಕ್ಕೆ ನಿಗದಿಯಾಗಿದೆ.ಮೊದಲನೆಯ ಪಂದ್ಯದಲ್ಲಿ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ವಿರುದ್ಧ 3-1ಅಂತರದಿಂದ ಗೆದ್ದು ಸಂಭ್ರಮಿಸಿದ್ದ ತಂಡ ಎರಡನೇ ಪಂದ್ಯದಲ್ಲಿ ದೆಹಲಿ ತೂಫಾನ್ಸ್ ವಿರುದ್ಧ ಪರಾಭವಗೊಂಡಿತ್ತು. ಈ ಟೂರ್ನಿಯಲ್ಲಿ ಸಮಬಲ ಸಾಧಿಸಿರುವ ಬೆಂಗಳೂರು ತಂಡ, ದೆಹಲಿ ವಿರುದ್ಧ ಗೆಲ್ಲುವ ರಣೋತ್ಸಾಹದಲ್ಲಿದೆ.ನಾಯಕ ಪಂಕಜ್ ಶರ್ಮ ಅವರ ಆಟದ ವೈಖರಿಗೆ ಅಪಾರ ಅಭಿಮಾನಿಗಳು ಮನಸೋತಿದ್ದು, ಅವರ ಚಾಕಚಕ್ಯತೆ ಗಮನ ಸೆಳೆಯುತ್ತಿದೆ. ದೆಹಲಿ ಆಟಗಾರರ ಸಾಮರ್ಥ್ಯ ಮತ್ತು ಲೋಪಗಳ ಕುರಿತು ಚೆನ್ನಾಗಿ ತಿಳಿದುಕೊಂಡಿರುವ ಬೆಂಗಳೂರು ಆಟಗಾರರು, ಈ ಬಾರಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ