ಸಂತೋಷ್‌ ಟ್ರೋಫಿ ಫುಟ್ಬಾಲ್‌: ಕರ್ನಾಟಕ-ದೆಹಲಿ ಡ್ರಾ

| Published : Feb 23 2024, 01:48 AM IST

ಸಂತೋಷ್‌ ಟ್ರೋಫಿ ಫುಟ್ಬಾಲ್‌: ಕರ್ನಾಟಕ-ದೆಹಲಿ ಡ್ರಾ
Share this Article
  • FB
  • TW
  • Linkdin
  • Email

ಸಾರಾಂಶ

ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ ಫೈನಲ್‌ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಡ್ರಾದೊಂದಿಗೆ ತನ್ನ ಅಭಿಯಾನ ಆರಂಭಿಸಿದೆ.

ಯೂಪಿಯಾ(ಅರುಣಾಚಲ ಪ್ರದೇಶ): ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ ಫೈನಲ್‌ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಡ್ರಾದೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಗುರುವಾರ ನಡೆದ ದೆಹಲಿ ವಿರುದ್ಧ ಪಂದ್ಯದಲ್ಲಿ ರಾಜ್ಯ ತಂಡ 1-1 ಗೋಲಿನಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿತು. 23ನೇ ನಿಮಿಷದಲ್ಲಿ ಅಪ್ಪು ಆರೋಗ್ಯ ಸ್ವಾಮಿ ಗೋಲು ಬಾರಿಸಿ ರಾಜ್ಯ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ 26ನೇ ನಿಮಿಷದಲ್ಲಿ ಕರ್ನಾಟಕದ ಪ್ರಬಿನ್‌ ಹೊಡೆದ ಸ್ವಂತ ಗೋಲು ದೆಹಲಿ ತಂಡದ ಸಮಬಲಕ್ಕೆ ಕಾರಣವಾಯಿತು. ‘ಬಿ’ ಗುಂಪಿನಲ್ಲಿರುವ ರಾಜ್ಯ ತಂಡ ಸದ್ಯ 1 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಫೆ.24ರಂದು ಮಿಜೋರಾಂ ತಂಡವನ್ನು ಎದುರಿಸಲಿದೆ.

ಏಷ್ಯಾಕಪ್‌ ಅರ್ಚರಿಯಲ್ಲಿ ಭಾರತಕ್ಕೆ 6 ಪದಕ ಖಚಿತ

ಬಗ್ದಾದ್‌(ಇರಾಕ್‌): ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಅರ್ಚರಿ ಟೂರ್ನಿಯ ಒಂದನೇ ಲೆಗ್‌ನಲ್ಲಿ ಭಾರತ ತಂಡಗಳು 6 ಪದಕ ಖಚಿತಪಡಿಸಿಕೊಂಡಿವೆ. ದೀಪಿಕಾ ಕುಮಾರಿ ಇದ್ದ ಮಹಿಳಾ ರೀಕರ್ವ್‌, ಪುರುಷರ ರೀಕರ್ವ್‌ ಹಾಗೂ ಮಿಶ್ರ ರೀಕರ್ವ್‌ ವಿಭಾಗಗಳಲ್ಲಿ ಭಾರತ ಫೈನಲ್‌ಗೇರಿದ್ದು, ಪದಕ ಗೆಲ್ಲುವುದು ಖಚಿತವಾಗಿದೆ. ಜೊತೆಗೆ ಕಾಂಪೌಂಡ್‌ ವಿಭಾಗದ ಪುರುಷ, ಮಹಿಳಾ ಹಾಗೂ ಮಿಶ್ರ ತಂಡ ವಿಭಾಗಗಳಲ್ಲೂ ಭಾರತೀಯರು ಫೈನಲ್‌ ಪ್ರವೇಶಿಸಿ ಪದಕ ಖಚಿತಪಡಿಸಿಕೊಂಡಿದ್ದಾರೆ.