ಇಂಗ್ಲೆಂಡ್‌ ವಿರುದ್ಧ ಮಿಂಚಿದ್ದ ಸರ್ಫರಾಜ್‌, ಜುರೆಲ್‌ಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆ

| Published : Mar 19 2024, 12:48 AM IST

ಇಂಗ್ಲೆಂಡ್‌ ವಿರುದ್ಧ ಮಿಂಚಿದ್ದ ಸರ್ಫರಾಜ್‌, ಜುರೆಲ್‌ಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಧ್ರುವ್ ಜುರೆಲ್‌ ಮತ್ತು ಸರ್ಫರಾಜ್‌ರನ್ನು ‘ಸಿ’ ದರ್ಜೆಗೆ ಸೇರಿಸಲಾಗಿದೆ. ಅವರು ಇನ್ನು ಬಿಸಿಸಿಐನಿಂದ ವಾರ್ಷಿಕ 1 ಕೋಟಿ ರು. ಸಂಭಾವನೆ ಪಡೆಯಲಿದ್ದಾರೆ.

ನವದೆಹಲಿ: ಭಾರತದ ಯುವ ಬ್ಯಾಟರ್‌ಗಳಾದ ಸರ್ಫರಾಜ್‌ ಖಾನ್‌ ಹಾಗೂ ಧ್ರುವ್‌ ಜುರೆಲ್‌ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಇವರಿಬ್ಬರ ಹೆಸರನ್ನು ಅನುಮೋದಿಸಲಾಗಿದೆ. ಈ ಋತುವಿನಲ್ಲಿ 3 ಟೆಸ್ಟ್‌ ಆಡಿದ್ದರಿಂದ ಅವರನ್ನು ‘ಸಿ’ ದರ್ಜೆಗೆ ಸೇರಿಸಲಾಗಿದ್ದು, ವಾರ್ಷಿಕ 1 ಕೋಟಿ ರು. ಸಂಭಾವನೆ ಪಡೆಯಲಿದ್ದಾರೆ. ಇನ್ನು, ಮಂಜು ಹಾಗೂ ಮಂದ ಬೆಳಕಿನ ಕಾರಣಕ್ಕೆ ರಣಜಿ ಟ್ರೋಫಿಯನ್ನು ಉತ್ತರ ಭಾರತದಲ್ಲಿ ಡಿಸೆಂಬರ್‌, ಜನವರಿಯಲ್ಲಿ ನಡೆಸದಿರಲು ಕೂಡಾ ಸಭೆಯಲ್ಲಿ ಬಿಸಿಸಿಐ ನಿರ್ಣಯ ಕೈಗೊಂಡಿದೆ.ಟಿ20: ಐರ್ಲೆಂಡ್‌ ವಿರುದ್ಧ ಆಫ್ಘನ್‌ಗೆ 10 ರನ್‌ ಜಯ

ಶಾರ್ಜಾ: ಐರ್ಲೆಂಡ್‌ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ 10 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌, ಮೊಹಮದ್ ನಬಿ(59), ಸದೀಖುಲ್ಲಾ(35), ರಶೀದ್‌ ಖಾನ್‌(25) ನೆರವಿನಿಂದ 20 ಓವರಲ್ಲಿ 9 ವಿಕೆಟ್‌ಗೆ 152 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಐರ್ಲೆಂಡ್‌ 8 ವಿಕೆಟ್‌ ನಷ್ಟದಲ್ಲಿ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆ್ಯಂಡ್ರ್ಯೂ ಬಾಲ್ಬಿರ್ನಿ 45, ಗ್ಯಾರೆಥ್‌ ಡೆಲನಿ 18 ಎಸೆತಗಳಲ್ಲಿ 39 ರನ್‌ ಸಿಡಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.