ಡಬಲ್ಸ್ ಫೈನಲ್ ಪ್ರವೇಶಿಸಿ ಸಾತ್ವಿಕ್-ಚಿರಾಗ್ ಇತಿಹಾಸ!
1 Min read
KannadaprabhaNewsNetwork
Published : Oct 07 2023, 02:13 AM IST| Updated : Oct 07 2023, 11:42 AM IST
Share this Article
FB
TW
Linkdin
Whatsapp
Image Credit: PTI
ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದು, ಏಷ್ಯಾಡ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದು, ಏಷ್ಯಾಡ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1982ರಲ್ಲಿ ಲೆರೋಯ್ ಫ್ರಾನ್ಸಿಸ್-ಪ್ರದೀಪ್ ಗಾಂಧಿ ಕಂಚು ಗೆದ್ದಿದ್ದು ಈವರೆಗೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.3 ಭಾರತದ ಜೋಡಿಯು ಮಾಜಿ ವಿಶ್ವ ಚಾಂಪಿಯನ್, ಮಲೇಷ್ಯಾದ ಆ್ಯರೊನ್ ಚಿಯಾ-ಸೊಹ್ ವೂಯಿ ವಿರುದ್ಧ 21-17, 21-12ರಲ್ಲಿ ಸುಲಭ ಗೆಲುವು ಸಾಧಿಸಿತು. ಈ ವರೆಗಿನ 8 ಮುಖಾಮುಖಿಗಳಲ್ಲಿ 7ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದ್ದ ಟೋಕಿಯೋ ಒಲಿಂಪಿಕ್ ಪದಕ ವಿಜೇತ ಮಲೇಷ್ಯಾ ಜೋಡಿಗೆ ಈ ಸಲ ಸಾತ್ವಿಕ್-ಚಿರಾಗ್ ಜೋಡಿ ಆಘಾತ ನೀಡಿತು. ಶನಿವಾರ ಫೈನಲ್‌ನಲ್ಲಿ ದ.ಕೊರಿಯಾದ ಚೊಯಿ ಸೊಲ್ಯು-ಕಿಮ್ ವೊನ್ಹೊ ಜೋಡಿಯ ಸವಾಲು ಎದುರಾಗಲಿದೆ. ವಿಶ್ವ ನಂ.1 ಆಗಲಿದೆ ಭಾರತೀಯ ಜೋಡಿ! ಸೆಮಿಫೈನಲ್ ಗೆಲುವಿನೊಂದಿಗೆ ಸಾತ್ವಿಕ್-ಚಿರಾಗ್ ಜೋಡಿ ಬಿಡಬ್ಲ್ಯುಎಫ್ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ಮೊತ್ತ ಮೊದಲ ಬಾರಿ ನಂ.1 ಸ್ಥಾನಕ್ಕೇರಲಿದೆ. ಪುರುಷರ ಡಬಲ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನ್ನುವ ದಾಖಲೆ ಬರೆಯಲಿದೆ. ಇತ್ತೀಚೆಗಷ್ಟೇ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದ ಭಾರತದ ಜೋಡಿ ಸದ್ಯ 3ನೇ ಸ್ಥಾನದಲ್ಲಿದೆ. ಕ್ರೀಡಾಕೂಟ ಮುಕ್ತಾಯಗೊಂಡ ಬಳಿಕ ರ್‍ಯಾಂಕಿಂಗ್ ಪಟ್ಟಿ ಪರಿಷ್ಕೃತಗೊಳ್ಳಲಿದ್ದು, ಭಾರತೀಯ ಜೋಡಿಯು ನಂ.1 ಸ್ಥಾನ ಅಲಂಕರಿಸಲಿದೆ.
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.