ಸಾರಾಂಶ
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಸ್‌ಸಿಎ)ಯ ಕ್ರೀಡಾಂಗಣದ ಹೆಸರನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮರು ನಾಮಕರಣಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
ರಾಜ್‌ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಸ್‌ಸಿಎ)ಯ ಕ್ರೀಡಾಂಗಣದ ಹೆಸರನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮರು ನಾಮಕರಣಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ಎಸ್‌ಸಿಎ ಕ್ರೀಡಾಂಗಣ ಎಂಬ ಹೆಸರಿದ್ದು, ಅದರ ಬದಲು ಬಿಸಿಸಿಐನ ಮಾಜಿ ಕಾರ್ಯದರ್ಶಿ, ಹಿರಿಯ ಕ್ರಿಕೆಟ್ ಆಡಳಿತಗಾರ ನಿರಂಜನ್ ಶಾ ಹೆಸರನ್ನು ಇಡಲಾಗುತ್ತದೆ. ಫೆ.15ರಂದು ಆರಂಭಗೊಳ್ಳಲಿರುವ ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮರು ನಾಮಕರಣ ಮಾಡಲಿದ್ದಾರೆ. 2013ರಲ್ಲಿ ಉದ್ಘಾಟನೆಗೊಂಡಿರುವ ಕ್ರೀಡಾಂಗಣದಲ್ಲಿ ಈ ವರೆಗೂ 2 ಟೆಸ್ಟ್, 4 ಏಕದಿನ, 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ.
ಡಬ್ಲ್ಯುಪಿಎಲ್: ಗುಜರಾತ್ಜೈಂಟ್ಸ್ಗೆ ಕ್ಲಿಂಗರ್ ಕೋಚ್ಮುಂಬೈ: ವುಮೆನ್ಸ್ ಪ್ರಿಮಿಯರ್ ಲೀಗ್‌ನ 2ನೇ ಅವೃತ್ತಿಗೆ ಗುಜರಾತ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಿಂಗರ್ ನೇಮಕಗೊಂಡಿದ್ದಾರೆ. ಮೆಂಟರ್ ಆಗಿ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಮತ್ತು ಬೌಲಿಂಗ್ ಕೋಚ್ ಆಗಿ ನೂಶಿನ್ ಅಲ್ ಖಾದೀರ್ ಮುಂದುವರಿಯಲಿದ್ದಾರೆ.