ಖೋ ಖೋ ಪಂದ್ಯಾವಳಿ ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ
KannadaprabhaNewsNetwork | Published : Oct 09 2023, 12:46 AM IST
ಖೋ ಖೋ ಪಂದ್ಯಾವಳಿ ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ
ಸಾರಾಂಶ
ಖೋ ಖೋ ಪಂದ್ಯಾವಳಿ ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ ತಮಿಳುನಾಡಿನ ಹೊಸೂರಿನ ಸೆಂಟ್ ಜಾನ್ ಬೋಸ್ಕೋ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರ ಮಟ್ಟದ ಅಸ್ಮಿತ ಖೇಲೋ ಇಂಡಿಯಾ ಬಾಲಕಿಯರ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕ ಜೂನಿಯರ್ ಹಾಗೂ ಸಬ್ ಜೂನಿಯರ್ ತಂಡಗಳು ದ್ವಿತೀಯ (ರನ್ನರ್) ಸ್ಥಾನ ಪಡೆದು ನವೆಂಬರ್‌ನಲ್ಲಿ ನಡೆಯಲಿರುವ ಆಲ್ ಇಂಡಿಯಾ ಖೋಖೋ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿವೆ. ಫೈನಲ್ ಪಂದ್ಯದಲ್ಲಿ ತಮಿಳುನಾಡು ಜೂನಿಯರ್ ಹಾಗೂ ಸಬ್ ಜೂನಿಯರ್ ತಂಡಗಳ ವಿರುದ್ದ ಕರ್ನಾಟಕದ ಎರಡೂ ತಂಡಗಳು ಸೋಲನುಭವಿಸಿ ದ್ವಿತೀಯ ಸ್ಥಾನ ಪಡೆದುಕೊಂಡವು. ಇನ್ನುಳಿದಂತೆ ಜೂನಿಯರ್ ವಿಭಾಗದಲ್ಲಿ ತಮಿಳುನಾಡು ಪ್ರಥಮ, ಕರ್ನಾಟಕ ದ್ವಿತೀಯ, ಕೇರಳ ತೃತೀಯ, ಆಂಧ್ರ ಪ್ರದೇಶ ನಾಲ್ಕನೇ ಸ್ಥಾನ ಪಡೆದರೆ, ಸಬ್ ಜೂನಿಯರ್ ವಿಭಾಗದಲ್ಲಿ ತಮಿಳುನಾಡು ಪ್ರಥಮ, ಕರ್ನಾಟಕ ದ್ವಿತೀಯ, ಪುದುಚೇರಿ ತೃತೀಯ ಹಾಗೂ ಕೇರಳ ನಾಲ್ಕನೇ ಸ್ಥಾನ ಪಡೆದುಕೊಂಡವು. ರಾಷ್ಟ್ರ ಮತ್ತು ರಾಜ್ಯ ಖೋಖೋ ಅಸೋಷಿಯೇಷನ್‌ನ ಪ್ರಮುಖರು ಭಾಗಿಯಾಗಿ ಬಹುಮಾನ ವಿತರಣೆ ಮಾಡಿದರು. ಕರ್ನಾಟಕ ಸಬ್ ಜೂನಿಯರ್ ತಂಡದಲ್ಲಿ ಶ್ರೀರಂಗಪಟ್ಟಣದ ಪತ್ರಕರ್ತ ಅಲ್ಲಾಪಟ್ಟಣ ಸತೀಶ್ ಪುತ್ರಿ ಪಟ್ಟಣದ ನ್ಯೂ ಆಕ್ಸ್ ಫರ್ಡ್ ಶಾಲಾ ವಿದ್ಯಾರ್ಥಿನಿ ಲೇಖನ ಎಸ್ ಭಾಗವಹಿಸಿ ಗಮನ ಸೆಳೆದರು. ಕರ್ನಾಟಕ ತಂಡದಿಂದ ಮಂಡ್ಯ, ಬೆಂಗಳೂರು, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಲೇಖನಾ ಅವರನ್ನು ಹಲವರು ಅಭಿನಂದಿಸಿದ್ದಾರೆ. ------------ 8ಕೆಎಂಎನ್ ಡಿ14,15 ತಮಿಳುನಾಡಿನ ಹೊಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಸ್ಮಿತ ಖೇಲೋ ಇಂಡಿಯಾ ಬಾಲಕಿಯರ ಖೋಖೋ ಪಂದ್ಯಾವಳಿಯಲ್ಲಿ ದ್ವಿತೀಯ (ರನ್ನರ್) ಸ್ಥಾನ ಪಡೆದ ಕರ್ನಾಟಕ ತಂಡ ಪ್ರಶಸ್ತಿ ಸ್ವೀಕರಿಸಿತು. ಶ್ರೀರಂಗಪಟ್ಟಣದ ಎಸ್ .ಲೇಖನ