2026ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಭಾರತೀಯ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಕೇಂದ್ರ ಕ್ರೀಡಾ ಸಚಿವಾಲಯ ಮಾನದಂದ ಬದಲಿಸಿದೆ. ಪದಕ ಗೆಲ್ಲಬಲ್ಲ ಕ್ರೀಡಾಪಟುಗಳನ್ನಷ್ಟೇ ಆಯ್ಕೆ ಮಾಡುವುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.

- ಆಯ್ಕೆ ಮಾನದಂಡ ಬದಲಿಸಿದ ಕ್ರೀಡಾ ಸಚಿವಾಲಯ

ನವದೆಹಲಿ: 2026ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಭಾರತೀಯ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಕೇಂದ್ರ ಕ್ರೀಡಾ ಸಚಿವಾಲಯ ಮಾನದಂದ ಬದಲಿಸಿದೆ. ಪದಕ ಗೆಲ್ಲಬಲ್ಲ ಕ್ರೀಡಾಪಟುಗಳನ್ನಷ್ಟೇ ಆಯ್ಕೆ ಮಾಡುವುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.

ಬುಧವಾರ ತನ್ನ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಂಡಿರುವ ಕ್ರೀಡಾ ಸಚಿವಾಲಯ, ಏಷ್ಯಾಡ್‌ಗೆ ಆಯ್ಕೆಯಾಗಬೇಕಿದ್ದರೆ ಏಷ್ಯನ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಅಗ್ರ-6, ತಂಡಗಳ ಸ್ಪರ್ಧೆಯಲ್ಲಿ ಅಗ್ರ-8ರೊಳಗೆ ಸ್ಥಾನ ಪಡೆದಿರಬೇಕು ಎಂಬ ಷರತ್ತು ವಿಧಿಸಿದೆ.

ಇನ್ನು ಕಾಮನ್‌ವೆಲ್ತ್‌, ಪ್ಯಾರಾ ಏಷ್ಯನ್‌, ಏಷ್ಯನ್‌ ಒಳಂಗಾಣ, ಏಷ್ಯನ್‌ ಬೀಚ್‌ ಕ್ರೀಡಾಕೂಟ, ಯುವ ಒಲಿಂಪಿಕ್ಸ್‌, ಏಷ್ಯನ್‌ ಯುವ ಕ್ರೀಡಾಕೂಟಗಳಲ್ಲಿನ ಪ್ರದರ್ಶನಗಳನ್ನು ಆಯ್ಕೆಗೆ ಪರಿಗಣಿಸುವುದಾಗಿಯೂ ಸಚಿವಾಲಯ ತಿಳಿಸಿದೆ.

ಇದೇ ವೇಳೆ, ವೆಚ್ಚ ತಗ್ಗಿಸುವ ಕಾರಣಕ್ಕಾಗಿ ಹೆಚ್ಚುವರಿ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊಕ್‌ ನೀಡಲು ಸಚಿವಾಲಯ ಮುಂದಾಗಿದೆ. ಮುಂದಿನ ವರ್ಷ ಸೆ.19ರಿಂದ ಅ.4ರವರೆಗೆ ಜಪಾನ್‌ನ ನಗೋಯಾದಲ್ಲಿ ಏಷ್ಯನ್‌ ಗೇಮ್ಸ್‌ ನಡೆಯಲಿದೆ.