ಆಟಗಾರರು ಇಲ್ಲದ್ದಕ್ಕೆ ಆಸೀಸ್‌ ಪರ ಪ್ರಧಾನ ಆಯ್ಕೆಗಾರ, ಕೋಚ್‌ಗಳಿಂದಲೇ ಫೀಲ್ಡಿಂಗ್‌!

| Published : May 30 2024, 12:52 AM IST / Updated: May 30 2024, 04:45 AM IST

ಆಟಗಾರರು ಇಲ್ಲದ್ದಕ್ಕೆ ಆಸೀಸ್‌ ಪರ ಪ್ರಧಾನ ಆಯ್ಕೆಗಾರ, ಕೋಚ್‌ಗಳಿಂದಲೇ ಫೀಲ್ಡಿಂಗ್‌!
Share this Article
  • FB
  • TW
  • Linkdin
  • Email

ಸಾರಾಂಶ

ಕಮಿನ್ಸ್‌, ಹೆಡ್‌, ಸ್ಟಾರ್ಕ್‌, ಗ್ರೀನ್‌, ಸ್ಟೋಯ್ನಿಸ್‌, ಮ್ಯಾಕ್ಸ್‌ವೆಲ್‌ ಇನ್ನೂ ಆಸೀಸ್‌ ತಂಡ ಕೂಡಿಕೊಂಡಿಲ್ಲ. ಹೀಗಾಗಿ ಸದ್ಯ ತಂಡದಲ್ಲಿ 9 ಮಂದಿ ಮಾತ್ರ ಇದ್ದಾರೆ.

ಟಿನಿಡಾಡ್‌: ನಮೀಬಿಯಾ ವಿರುದ್ಧ ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಆಟಗಾರರ ಕೊರತೆ ಎದುರಾದ ಕಾರಣ ಪ್ರಧಾನ ಆಯ್ಕೆಗಾರ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಕೋಚ್‌ಗಳು ಕ್ಷೇತ್ರರಕ್ಷಣೆ ನಡೆಸಿದ ಪ್ರಸಂಗ ಜರುಗಿತು.

 ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಕಮಿನ್ಸ್‌, ಹೆಡ್‌, ಸ್ಟಾರ್ಕ್‌, ಗ್ರೀನ್‌, ಸ್ಟೋಯ್ನಿಸ್‌, ಮ್ಯಾಕ್ಸ್‌ವೆಲ್‌ ಇನ್ನೂ ಆಸೀಸ್‌ ತಂಡ ಕೂಡಿಕೊಂಡಿಲ್ಲ. ಹೀಗಾಗಿ ಸದ್ಯ ತಂಡದಲ್ಲಿ 9 ಮಂದಿ ಮಾತ್ರ ಇದ್ದಾರೆ. 

ಈ ಹಿನ್ನೆಲೆಯಲ್ಲಿ ಮಂಗಳವಾರದ ಪಂದ್ಯಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್‌ ಬೈಲಿ, ಮುಖ್ಯ ಕೋಚ್‌ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್‌, ಬ್ಯಾಟಿಂಗ್‌ ಕೋಚ್‌ ಬ್ರಾಡ್‌ ಹಾಗ್‌, ಫೀಲ್ಡಿಂಗ್‌ ಕೋಚ್‌ ಆ್ಯಂಡ್ರೆ ಬೊರೊವೆಕ್‌ ಕೂಡಾ ಕ್ಷೇತ್ರರಕ್ಷಣೆ ಮಾಡಿದರು.

ಇಂಗ್ಲೆಂಡ್‌ vs ಪಾಕಿಸ್ತಾನ 3ನೇ ಟಿ20 ಮಳೆಗೆ ರದ್ದು

ಕಾರ್ಡಿಫ್‌: ಇಂಗ್ಲೆಂಡ್‌-ಪಾಕಿಸ್ತಾನ ನಡುವೆ ನಿಗದಿಯಾಗಿದ್ದ 3ನೇ ಟಿ20 ಪಂದ್ಯ ಮಳೆಗೆ ಆಹುತಿಯಾಗಿದೆ. ಮಂಗಳವಾರ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಟಾಸ್‌ ಕೂಡಾ ಕಾಣದೆ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಸದ್ಯ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ಗೆ 1-0 ಮುನ್ನಡೆಯಲ್ಲಿದ್ದು, ಇನ್ನೊಂದು ಪಂದ್ಯ ಗುರುವಾರ ನಡೆಯಬೇಕಿದೆ. ಸರಣಿಯ ಮೊದಲ ಪಂದ್ಯ ಕೂಡಾ ಮಳೆಯಿಂದಾಗಿ ರದ್ದುಗೊಂಡಿತ್ತು.