ಸಾರಾಂಶ
ಹೈದರಾಬಾದ್: 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಸೆಮಿಫೈನಲ್ ಕದನಕ್ಕೆ ವೇದಿಕೆ ಸಜ್ಜುಗೊಂಡಿದೆ. ಬುಧವಾರ 2 ಸೆಮೀಸ್ ಪಂದ್ಯಗಳು ನಡೆಯಲಿದ್ದು, ಇಲ್ಲಿನ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಮೊದಲ ಸೆಮಿಫೈನಲ್‌ನಲ್ಲಿ ಪುಣೇರಿ ಪಲ್ಟನ್ ಹಾಗೂ ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿದೆ. 2ನೇ ಸೆಮಿಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಪರಸ್ಪರ ಸೆಣಸಾಡಲಿವೆ.
ಲೀಗ್ ಹಂತದ ಪಂದ್ಯಗಳ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಪುಣೇರಿ ಮತ್ತು 2ನೇ ಸ್ಥಾನ ಪಡೆದುಕೊಂಡಿದ್ದ ಹಾಲಿ ಚಾಂಪಿಯನ್ ಜೈಪುರ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದವು.
ಮತ್ತೊಂದೆಡೆ ಪಾಟ್ನಾ ಪೈರೇಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಎಲಿಮಿನೇಟರ್‌ನಲ್ಲಿ ಗೆದ್ದು ಅಂತಿಮ 4ರ ಘಟ್ಟಕ್ಕೆ ಕಾಲಿಟ್ಟಿವೆ.
ಸೋಮವಾರ ನಡೆದಿದ್ದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ ಪಾಟ್ನಾ 37-35 ಅಂಕಗಳಿಂದ ರೋಚಕ ಗೆಲುವು ಸಾಧಿಸಿತ್ತು. 2ನೇ ಎಲಿಮಿನೇಟರ್ ಪಂದ್ಯದಲ್ಲಿ ಹರ್ಯಾಣಕ್ಕೆ ಗುಜರಾತ್ ವಿರುದ್ಧ 42-25 ಅಂಕಗಳ ಗೆಲುವು ಲಭಿಸಿತ್ತು.
ಪಾಟ್ನಾಗೆ 5ನೇ, ಹರ್‍ಯಾಣಕ್ಕೆ ಚೊಚ್ಚಲ ಫೈನಲ್ ತವಕ!
ಸೆಮೀಸ್‌ಗೇರಿರುವ 4 ತಂಡಗಳ ಪೈಕಿ ಪಾಟ್ನಾ ಪ್ರೊ ಕಬಡ್ಡಿಯಲ್ಲಿ ಅತ್ಯಂತ ಯಶಸ್ವಿ ತಂಡ. 3 ಬಾರಿ ಪ್ರಶಸ್ತಿ ಗೆದ್ದಿರುವ ಪಾಟ್ನಾ ಈ ಬಾರಿ 5ನೇ ಫೈನಲ್ ತವಕದಲ್ಲಿದೆ. ಹಾಲಿ ಚಾಂಪಿಯನ್ ಜೈಪುರ 4ನೇ ಬಾರಿ ಪ್ರಶಸ್ತಿ ಸುತ್ತಿಗೇರಲು ಕಾಯುತ್ತಿದ್ದರೆ, ಹರ್ಯಾಣ ಚೊಚ್ಚಲ ಫೈನಲ್‌ಗಾಗಿ ತವಕಿಸುತ್ತಿದೆ. ಕಳೆದ ಬಾರಿ ರನ್ನರ್-ಅಪ್ ಪುಣೇರಿ 2ನೇ ಫೈನಲ್ ನಿರೀಕ್ಷೆಯಲ್ಲಿದೆ.
ಪಂದ್ಯಗಳ ಸಮಯ: ಪುಣೆ-ಪಾಟ್ನಾರಾತ್ರಿ 8 ಗಂಟೆಗೆ, ಜೈಪುರ-ಹರ್ಯಾಣ, ರಾತ್ರಿ 9 ಗಂಟೆಗೆ, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್