ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಹಲ್ಲೆಗೆ ಯತ್ನಿಸಿದ ಬಾಂಗ್ಲಾದ ಶಕೀಬ್‌

| Published : May 08 2024, 01:06 AM IST

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಹಲ್ಲೆಗೆ ಯತ್ನಿಸಿದ ಬಾಂಗ್ಲಾದ ಶಕೀಬ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಕೀಬ್‌ ಸದಾ ಒಂದಿಲ್ಲೊಂದು ವಿಷಯಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಅಭಿಯಾನಿಯ ಮೊಬೈಲ್‌ ಕಸಿದು, ಅವರಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

ಢಾಕಾ: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಬಾಂಗ್ಲಾದೇಶದ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌, ಈಗ ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಹಲ್ಲೆ ನಡೆಸಲು ಯತ್ನಿಸಿ ಟೀಕೆಗೆ ಗುರಿಯಾಗಿದ್ದಾರೆ.ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಢಾಕಾ ಪ್ರೀಮಿಯರ್‌ ಲೀಗ್‌ ವೇಳೆ ಈ ಘಟನೆ ನಡೆದಿದೆ. ಶೇಖ್‌ ಜಮಾಲ್‌ ತಂಡದ ಪರ ಆಡುತ್ತಿರುವ ಶಕೀಬ್‌, ಫ್ರೈಮ್‌ ಬ್ಯಾಂಕ್‌ ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನ ಮೈದಾನದಲ್ಲಿದ್ದರು. ಈ ವೇಳೆ ಅಭಿಮಾನಿಯೋರ್ವ ಶಕೀಬ್‌ ಬಳಿ ಬಂದು ಸೆಲ್ಫಿಗೆ ಮನವಿ ಮಾಡಿದ್ದಾರೆ. ಈ ವೇಳೆ ಶಕೀಬ್‌, ಅಭಿಯಾನಿಯ ಮೊಬೈಲ್‌ ಕಸಿದು, ಅವರಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಗೆದ್ದ ಬಾಂಗ್ಲಾದೇಶ

ಚಿತ್ತಗಾಂಗ್‌: ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಬಾಂಗ್ಲಾದೇಶ ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ 3-0 ಅಂತರದಲ್ಲಿ ಕೈವಶಪಡಿಸಿಕೊಂಡಿದೆ. ಮಂಗಳವಾರ 3ನೇ ಪಂದ್ಯದಲ್ಲಿ ಬಾಂಗ್ಲಾಕ್ಕೆ 9 ರನ್ ಗೆಲುವು ಲಭಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 5 ವಿಕೆಟ್‌ಗೆ 165 ರನ್‌ ಕಲೆಹಾಕಿತು. ತೌಹೀದ್ ಹೃದೊಯ್‌ 57, ಜಾಕರ್‌ ಅಲಿ 44 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಜಿಂಬಾಬ್ವೆ 9 ವಿಕೆಟ್‌ಗೆ 156 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಫರಾಝ್‌ ಅಕ್ರಂ(ಔಟಾಗದೆ 34), ಮರುಮಾನಿ(31) ಹೋರಾಟ ವ್ಯರ್ಥವಾಯಿತು.