ಬೆಟ್ಟಿಂಗ್ ಆ್ಯಪ್‌ ಕೇಸ್‌: ಇ.ಡಿ. ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಶಿಖರ್‌ ಧವನ್

| Published : Sep 05 2025, 01:00 AM IST

ಬೆಟ್ಟಿಂಗ್ ಆ್ಯಪ್‌ ಕೇಸ್‌: ಇ.ಡಿ. ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಶಿಖರ್‌ ಧವನ್
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಅಧಿಕಾರಿಗಳು ಮಾಜಿ ಕ್ರಿಕೆಟಿಗ ಸುರೇಶ್‌ ರೈನಾರನ್ನು ವಿಚಾರಣೆ ನಡೆಸಿದ್ದರು.

ನವದೆಹಲಿ: ಬೆಟ್ಟಿಂಗ್ ಆ್ಯಪ್‌ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಕ್ರಿಕೆಟಿಗ ಶಿಖರ್ ಧವನ್‌ ಗುರುವಾರ ಜಾರಿ ನಿರ್ದೇಶಾನಲಯ(ಇ.ಡಿ)ದ ವಿಚಾರಣೆಗೆ ಹಾಜರಾದರು. ಪ್ರಕರಣಕ್ಕೆ ಸಂಬಂಧಿಸಿಂತೆ ಅಧಿಕಾರಿಗಳು ಶಿಖರ್ ಧವನ್‌ಗೆ ಸಮನ್ಸ್ ನೀಡಿದ್ದರು. ಹೀಗಾಗಿ ಅವರು ದೆಹಲಿಯ ಇ.ಡಿ. ಕಚೇರಿಯಲ್ಲಿ ವಿಚಾರಣೆ ಎದುರಿಸಿದರು.1xbet (1ಎಕ್ಸ್‌ ಬೆಟ್‌) ಹೆಸರಿನ ಅಕ್ರಮ ಬೆಟ್ಟಿಂಗ್ ಆ್ಯಪ್‌ ಜತೆ ಧವನ್ ನಂಟು ಹೊಂದಿದ್ದಾರೆ ಎನ್ನುವ ಆರೋಪ ಹಿನ್ನೆಲೆ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಅಧಿಕಾರಿಗಳು ಮಾಜಿ ಕ್ರಿಕೆಟಿಗ ಸುರೇಶ್‌ ರೈನಾರನ್ನು ವಿಚಾರಣೆ ನಡೆಸಿದ್ದರು.ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಲೆಗ್‌ ಸ್ಪಿನ್ನರ್ ಅಮಿತ್‌ ಮಿಶ್ರಾ

ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್‌ ಅಮಿತ್‌ ಮಿಶ್ರಾ ಎಲ್ಲಾ ಮಾದರಿ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಪ್ರಕಟಿಸಿದ್ದಾರೆ. ಈ ಮೂಲಕ 25 ವರ್ಷಗಳ ವೃತ್ತಿಪರ ಕ್ರಿಕೆಟ್‌ ಬದುಕಿಗೆ ತೆರೆ ಎಳೆದಿದ್ದಾರೆ.2000-01ರಲ್ಲೇ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದ ಹರ್ಯಾಣದ ಮಿಶ್ರಾ 2003ರಲ್ಲಿ ಏಕದಿನ ಕ್ರಿಕೆಟ್‌ ಮೂಲಕ ಭಾರತ ಪರ ಪಾದಾರ್ಪಣೆ ಮಾಡಿದ್ದರು. ಅವರು ಭಾರತ ಪರ 22 ಟೆಸ್ಟ್‌ನಲ್ಲಿ 76 ವಿಕೆಟ್‌, 36 ಏಕದಿನದಲ್ಲಿ 64 ವಿಕೆಟ್‌, 10 ಟಿ20 ಪಂದ್ಯಗಳಲ್ಲಿ 16 ವಿಕೆಟ್‌ ಪಡೆದಿದ್ದಾರೆ. 42 ವರ್ಷದ ಮಿಶ್ರಾ 2017ರಲ್ಲಿ ಕೊನೆ ಬಾರಿ ಭಾರತ ಪರ ಆಡಿದ್ದು, ಆ ಬಳಿಕ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. 2024ರ ಐಪಿಎಲ್‌ನಲ್ಲಿ ಲಖನೌ ಪರ ಕೊನೆ ಬಾರಿ ವೃತ್ತಿಪರ ಕ್ರಿಕೆಟ್‌ ಆಡಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 535, ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ 252 ಹಾಗೂ ಟಿ20 ಕ್ರಿಕೆಟ್‌ನಲ್ಲಿ 285 ವಿಕೆಟ್‌ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌, ಡೆಕ್ಕನ್‌ ಚಾರ್ಜರ್ಸ್‌, ಡೆಲ್ಲಿ ಹಾಗೂ ಲಖನೌ ಪರ ಆಡಿರುವ ಅವರು, ಟೂರ್ನಿಯಲ್ಲಿ 3 ಬಾರಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.