ಶೂಟರ್‌ ವಿಜಯ್‌ವೀರ್‌ ಒಲಿಂಪಿಕ್ಸ್‌ಗೆ ಅರ್ಹತೆ

| Published : Jan 14 2024, 01:31 AM IST / Updated: Jan 14 2024, 02:22 PM IST

ಸಾರಾಂಶ

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಭಾರತೀಯರ ಪಾರಮ್ಯ ಮುಂದುವರಿದಿದೆ. ಭಾರತದ 25 ಮೀ. ರ್‍ಯಾಪಿಡ್‌ ಫೈಯರ್‌ ವಿಭಾಗದಲ್ಲಿ ಶನಿವಾರ ಕಂಚಿನ ಪದಕ ಗೆದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಭಾರತೀಯರ ಪಾರಮ್ಯ ಮುಂದುವರಿದಿದೆ. ಭಾರತದ 25 ಮೀ. ರ್‍ಯಾಪಿಡ್‌ ಫೈಯರ್‌ ವಿಭಾಗದಲ್ಲಿ ಶನಿವಾರ ಕಂಚಿನ ಪದಕ ಗೆದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ಜಕಾರ್ತ: ವಿಜಯ್‌ವೀರ್‌ ಸಿಧು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 17ನೇ ಶೂಟರ್‌ ಎನಿಸಿದ್ದಾರೆ. 21 ವರ್ಷದ ವಿಜಯ್‌ವೀರ್‌, ಇಲ್ಲಿ ನಡೆಯುತ್ತಿರುವ ಏಷ್ಯನ್‌ ಅರ್ಹತಾ ಟೂರ್ನಿಯ 25 ಮೀ. ರ್‍ಯಾಪಿಡ್‌ ಫೈಯರ್‌ ವಿಭಾಗದಲ್ಲಿ ಶನಿವಾರ ಕಂಚಿನ ಪದಕ ಪಡೆದು, ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. ವಿಜಯ್‌, ಗುವಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.

ದಕ್ಷಿಣ ಭಾರತ ಕುಸ್ತಿ: ರಾಜ್ಯಕ್ಕೆ 30 ಪದಕ!

ಈರೋಡ್‌(ತಮಿಳುನಾಡು): ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕುಸ್ತಿಪಟುಗಳು ಪಾರಮ್ಯ ಮೆರೆದಿದ್ದು, ಸಮಗ್ರ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಕೂಟದಲ್ಲಿ ರಾಜ್ಯಕ್ಕೆ 23 ಚಿನ್ನ, 4 ಬೆಳ್ಳಿ, 3 ಕಂಚು ಲಭಿಸಿತು. 

ಫ್ರೀಸ್ಟೈಲ್‌ನಲ್ಲಿ 8 ಚಿನ್ನ, 2 ಬೆಳ್ಳಿ, ಗ್ರೀಕೊ ರೋಮನ್‌ ವಿಭಾಗದಲ್ಲಿ 9 ಚಿನ್ನ, 1 ಬೆಳ್ಳಿ, ಮಹಿಳಾ ಫ್ರೀಸ್ಟೈಲ್‌ನಲ್ಲಿ 6 ಚಿನ್ನ, 1 ಬೆಳ್ಳಿ, 3 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಸಾಧಕ ಕುಸ್ತಿಪಟುಗಳನ್ನು ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಬಿ.ಗಣರಂಜನ್ ಶೆಟ್ಟಿ ಅಭಿನಂದಿಸಿದರು.

ಕಾರ್ಯದರ್ಶಿ ಶ್ರೀನಿವಾಸ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ತಾಂತ್ರಿಕ ಸಮಿತಿಯ ಮುಖ್ಯಸ್ಥ ವಿನೋದ್ ಕುಮಾರ್ ಉಪಸ್ಥಿತರಿದ್ದರು.