ಸಾರಾಂಶ
ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ರಿಧಂ ಸಾಂಗ್ವಾನ್-ಉಜ್ವಲ್ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ.
ಕೈರೋ(ಈಜಿಪ್ಟ್): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ರಿಧಂ ಸಾಂಗ್ವಾನ್-ಉಜ್ವಲ್ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಜೋಡಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಅಗ್ರಸ್ಥಾನಿಯಾಯಿತು. ಇನ್ನು ಅನುರಾಧಾ ದೇವಿ 10 ಮೀ. ಏರ್ ಪಿಸ್ತೂಲ್ ಮಹಿಳಾ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ. ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದ ಸಾಗರ್ ಡಾಂಗಿ ಪದಕ ಗಳಿಸುವಲ್ಲಿ ವಿಫಲರಾದರು. ಅರ್ಜುನ್ ಬಬುತಾ ಮತ್ತು ಸೋನಮ್ ಮಸ್ಕರ್ ಜೋಡಿ 10 ಮೀ. ಏರ್ ರೈಫಲ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ನಾಳೆಯಿಂದ ಪುಣೆಯಲ್ಲಿ
ಡಬ್ಲ್ಯುಎಫ್‌ಐನ ಕುಸ್ತಿ ಕೂಟ
ನವದೆಹಲಿ: ಅಮಾನತುಗೊಂಡಿರುವ ಭಾರತೀಯ ಕುಸ್ತಿ ಫಡೆರೇಶನ್‌ನ ಅಧ್ಯಕ್ಷ ಸಂಜಯ್ ಸಿಂಗ್ ಮತ್ತೆ ಕ್ರೀಡಾ ಸಚಿವಾಲಯಕ್ಕೆ ಸಡ್ಡು ಹೊಡೆದು ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್ ಆಯೋಜಿಸುವುದಾಗಿ ತಿಳಿಸಿದ್ದು, 29ರಿಂದ 31ರ ವರೆಗೆ ಕೂಟ ನಡೆಯಲಿದೆ ಎಂದಿದ್ದಾರೆ. ಕೂಟದಲ್ಲಿ ಪಂಜಾಬ್, ಒಡಿಶಾ ಹೊರತುಪಡಿಸಿ ಉಳಿದ ರಾಜ್ಯಗಳ 700 ಕುಸ್ತಿಪಟುಗಳು ಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಕೂಟ ನಡೆಯಲಿದ್ದು, ಫ್ರೀ ಸ್ಟೈಲ್, ಗ್ರೀಕೊ ರೋಮನ್, ಮಹಿಳಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.