ಸಾರಾಂಶ
ಎಂ.ಎಸ್.ಧೋನಿ, ರೋಹಿತ್ ಶರ್ಮಾ ಈ ವರ್ಷ ನಾಯಕನಾಗಿ ಕಾಣಿಸಿಕೊಳ್ಳದ ಕಾರಣ ಟೂರ್ನಿಯಲ್ಲಿ ಆಡಲಿರುವ 10 ನಾಯಕರ ಪೈಕಿ ನಾಯಕನಾಗಿ ಅತಿಹೆಚ್ಚು ಅನುಭವ ಹೊಂದಿರುವ ಆಟಗಾರ ಎಂದರೆ ಅದು ಶ್ರೇಯಸ್ ಅಯ್ಯರ್.
ನವದೆಹಲಿ: ಧೋನಿ ಹಾಗೂ ರೋಹಿತ್ ಈ ಬಾರಿ ನಾಯಕರಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ, 17ನೇ ಆವೃತ್ತಿಯಲ್ಲಿ ತಂಡಗಳನ್ನು ಮುನ್ನಡೆಸಲಿರುವ ನಾಯಕರ ಪೈಕಿ ಅತ್ಯಂತ ಅನುಭವಿ ನಾಯಕ ಎಂದರೆ ಅದು ಶ್ರೇಯಸ್ ಅಯ್ಯರ್.
ಕೋಲ್ಕತಾ ನೈಟ್‌ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿ ಶ್ರೇಯಸ್ ಒಟ್ಟು 55 ಪಂದ್ಯಗಳಲ್ಲಿ ಅವರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ.ಕೆ.ಎಲ್.ರಾಹುಲ್ 51 ಪಂದ್ಯಗಳಲ್ಲಿ ನಾಯಕನಾಗಿದ್ದು, ಸಂಜು ಸ್ಯಾಮ್ಸನ್ 45, ಹಾರ್ದಿಕ್ ಪಾಂಡ್ಯ 31, ರಿಷಭ್ ಪಂತ್ 30, ಫಾಫ್ ಡು ಪ್ಲೆಸಿ 27, ಶಿಖರ್ ಧವನ್ 22 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದಾರೆ.
ಋತುರಾಜ್ ಗಾಯಕ್ವಾಡ್, ಶುಭ್‌ಮನ್ ಗಿಲ್ ಹಾಗೂ ಪ್ಯಾಟ್ ಕಮಿನ್ಸ್ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.