ಶ್ರೇಯಸ್‌ ಅಯ್ಯರ್‌ಗೆ ಮತ್ತೆ ಬೆನ್ನು ನೋವು: ಈ ಬಾರಿ ಐಪಿಎಲ್‌ಗೆ ಅನುಮಾನ

| Published : Mar 15 2024, 01:19 AM IST

ಸಾರಾಂಶ

ಶ್ರೇಯಸ್‌ ಮುಂಬೈ ಪರ ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡುತ್ತಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ 95 ರನ್‌ ಸಿಡಿಸಿದ್ದರು. ಆದರೆ 3ನೇ ದಿನ ಮತ್ತೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಪಂದ್ಯದ ಕೊನೆ 2 ದಿನ ಫೀಲ್ಡ್‌ ಮಾಡಲಿಲ್ಲ.

ನವದೆಹಲಿ: ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದರೊಂದಿಗೆ ಅಯ್ಯರ್‌ 17ನೇ ಆವೃತ್ತಿ ಐಪಿಎಲ್‌ನಿಂದಲೇ ಹೊರಬೀಳುವ ಭೀತಿ ಎದುರಾಗಿದೆ.ಮುಂಬೈ ತಂಡದ ಪರ ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡುತ್ತಿದ್ದ ಶ್ರೇಯಸ್‌ 2ನೇ ಇನ್ನಿಂಗ್ಸ್‌ನಲ್ಲಿ 95 ರನ್‌ ಸಿಡಿಸಿದ್ದರು. ಆದರೆ 3ನೇ ದಿನ ಮತ್ತೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಪಂದ್ಯದ ಕೊನೆ 2 ದಿನಗಳಾದ ಬುಧವಾರ, ಗುರುವಾರ ಅವರು ಫೀಲ್ಡ್‌ ಮಾಡಲಿಲ್ಲ. ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸಂಪೂರ್ಣ ಐಪಿಎಲ್‌ಗೆ ಅಲಭ್ಯರಾದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ.ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಭಾರತ ಪರ ಆಡಿದ್ದ ಶ್ರೇಯಸ್‌, ಮೊದಲ ಟೆಸ್ಟ್‌ ಬಳಿಕ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದರು. ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಚೇತರಿಸಿ, ಮುಂಬೈ ರಣಜಿ ತಂಡ ಸೇರಿದ್ದರು. ಈ ನಡುವೆ ರಣಜಿ ತಪ್ಪಿಸಿದ ಕಾರಣ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದಲೂ ಶ್ರೇಯಸ್‌ ಹೊರಬಿದ್ದಿದ್ದರು.ಶ್ರೇಯಸ್‌ ಸದ್ಯ ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ನಾಯಕನಾಗಿದ್ದು, ಮಾ.23ರಂದು ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ಆಡುವ ಮೂಲಕ ಕೆಕೆಆರ್‌ ಈ ಬಾರಿ ಅಭಿಯಾನ ಆರಂಭಿಸಲಿದೆ.