ಸಾರಾಂಶ
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗ್ತಾರಾ ಶ್ರೇಯಸ್ ಅಯ್ಯರ್. ಗಂಭೀರ್ ಕೋಚ್ ಆದರೆ ಶ್ರೇಯಸ್‌ಗೆ ಒಲಿಯಲಿದೆಯೇ ಅದೃಷ್ಟ?
ನವದೆಹಲಿ: ಗೌತಮ್ ಗಂಭೀರ್ ಭಾರತ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗುತ್ತಿದ್ದಂತೆ ತಂಡದಿಂದ ಹೊರಬಿದ್ದಿರುವ ಬ್ಯಾಟರ್ ಶ್ರೇಯಸ್ ಅಯ್ಯರ್‌ಗೆ ಮತ್ತೆ ಅವಕಾಶ ಸಿಗಬಹುದು ಎನ್ನುವ ಚರ್ಚೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ. ಗಂಭೀರ್ ಮಾರ್ಗದರ್ಶನದಡಿ ಶ್ರೇಯಸ್ ಇತ್ತೀಚೆಗೆ ಕೆಕೆಆರ್ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಜುಲೈನಲ್ಲಿ ಭಾರತ ತಂಡ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದ್ದು, 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೆ ಶ್ರೇಯಸ್ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗದೆ ಇದ್ದರೂ ಜುಲೈ ಅಂತ್ಯದಲ್ಲಿ ಶ್ರೀಲಂಕಾಕ್ಕೆ 3 ಏಕದಿನ ಪಂದ್ಯವಾಡಲು ಭಾರತ ತಂಡ ತೆರಳಲಿದ್ದು, ಆ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
;Resize=(128,128))
;Resize=(128,128))
;Resize=(128,128))