ಚೇತಶ್ವರ್‌ ಪೂಜಾರಗಿಂತ ಶುಭಮನ್‌ ಗಿಲ್‌ಗೆ ಹೆಚ್ಚಿನ ಆದ್ಯತೆ: ಅನಿಲ್‌ ಕುಂಬ್ಳೆ

| Published : Jan 30 2024, 02:00 AM IST

ಚೇತಶ್ವರ್‌ ಪೂಜಾರಗಿಂತ ಶುಭಮನ್‌ ಗಿಲ್‌ಗೆ ಹೆಚ್ಚಿನ ಆದ್ಯತೆ: ಅನಿಲ್‌ ಕುಂಬ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಕ್ರಿಕೆಟ್‌ ತಂಡದಲ್ಲಿ ಶುಭಮನ್‌ ಗಿಲ್‌ಗೆ ಅನುಭವಿ ಬ್ಯಾಟರ್‌ ಚೇತಶ್ವರ್‌ ಪೂಜಾರಗಿಂತ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಮಾಜಿ ನಾಯಕ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಗಿಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಕಾಣುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.

ಹೈದರಾಬಾದ್‌: ಭಾರತ ಕ್ರಿಕೆಟ್‌ ತಂಡದಲ್ಲಿ ಶುಭಮನ್‌ ಗಿಲ್‌ಗೆ ಅನುಭವಿ ಬ್ಯಾಟರ್‌ ಚೇತಶ್ವರ್‌ ಪೂಜಾರಗಿಂತ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಮಾಜಿ ನಾಯಕ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಗಿಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಕಾಣುತ್ತಿರುವುದಕ್ಕೆ ಸಂಬಂಧಿಸಿ ಮಾತನಾಡಿರುವ ಕುಂಬ್ಳೆ, ಗಿಲ್‌ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 128 ರನ್‌ ಗಳಿಸಿದ್ದು ಬಿಟ್ಟರೆ, ಅವರಾಡಿದ 11 ಟೆಸ್ಟ್‌ಗಳಲ್ಲಿ ಗಿಲ್‌ ಅವರಿಂದ ಒಂದು ಅರ್ಧಶತಕ ಕೂಡಾ ದಾಖಲಾಗಿಲ್ಲ. 36 ರನ್‌ ಅವರಿಂದ ದಾಖಲಾದ ಗರಿಷ್ಠ ಸ್ಕೋರ್‌. ಭಾನುವಾರ ಮುಕ್ತಾಯಗೊಂಡ ಇಂಗ್ಲೆಂಡ್‌ ವಿರುದ್ಧ ಕೂಡಾ ಅವರು 23, 0 ಔಟಾಗಿದ್ದಾರೆ. ಆದಾಗ್ಯೂ 100 ಟೆಸ್ಟ್‌ ಆಡಿರುವ ಪೂಜಾರ ಅವರಿಗೆ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಅವರತ್ತ ಹಿಂತಿರುಗಿ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ರಣಜಿ ಪಂದ್ಯದಲ್ಲಿ ದ್ವಿಶತ ದಾಖಲಿಸಿದ್ದ ಚೇತೇಶ್ವರ್‌ ಪೂಜಾರ ಅವರನ್ನು 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಂತರ ನಿರ್ಲಕ್ಷಿಸಿಲಾಗಿದೆ. ರೋಹಿತ್‌ ಶರ್ಮಾ ಯುವ ಆಟಗಾರರಿಗೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ. ಅದರಿಂದ 2ನೇ ಟೆಸ್ಟ್‌ನಲ್ಲಿ ಗಿಲ್‌ ತಮ್ಮ ಮನಸ್ಥಿತಿ ಹೊಂದಿಸಿಕೊಳ್ಳಬೇಕು ಮತ್ತು ತಂತ್ರಗಳೊಂದಿಗೆ ಆಡಬೇಕು. 2ನೇ ಟೆಸ್ಟ್‌ ವೇಳೆ ಗಿಲ್‌ ಗಮನ ವಹಿಸಬೇಕಾದ ಅಪಾಯಕಾರಿ ಒತ್ತಡ ಅವರ ಮೇಲಿದೆ ಎಂದು ಮಾಜಿ ನಾಯಕ ಅನಿಲ್‌ ಕುಂಬ್ಳೆ ಹೇಳಿದ್ದಾರೆ.