ಸಾರಾಂಶ
ಕನ್ನಡಪ್ರಭ ವಾರ್ತೆ, ತಿಪಟೂರು: ಚೀನಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ೧೫೦೦ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದ ಕಲ್ಪತರು ನಾಡು ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್‌ಗೆ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ರಾಷ್ಟ್ರೀಯ ಖೋ-ಖೋ ಸಂಸ್ಥೆ ಉಪಾಧ್ಯಕ್ಷರಾದ ಲೋಕೇಶ್ವರ ನೇತೃತ್ವದಲ್ಲಿ ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳವರು ನಗರದ ಅರಳೀಕಟ್ಟೆ ಬಳಿ ಸನ್ಮಾನ ಸಮಾರಂಭ ದಲ್ಲಿ ಸನ್ಮಾನಿಸಿ ಶುಭಹಾರೈಸಿ ಅಭಿನಂದಿಸಲಾಯಿತು.
ತಿಪಟೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಲೋಕೇಶ್ವರ ಅವರು ಶರತ್ ಸಾಧನೆ ಮೆಚ್ಚಿ 10 ಸಾವಿರ ರು. ನಗದು ಪ್ರೋತ್ಸಾಹ ನೀಡಿ ಸನ್ಮಾನಿಸಿ ಮಾತನಾಡಿ, ತಾಲೂಕಿನ ಮಾಕಹಳ್ಳಿ ಗ್ರಾಮದ ಭಾಗ್ಯಮ್ಮ, ಶಂಕರಪ್ಪನವರ ಮಗನಾದ ಶರತ್ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಶರತ್ ದಿವ್ಯಾಂಗ ಚೇತನರಾಗಿದ್ದರೂ ಇಂತಹ ಸಾಧನೆ ರಾಷ್ಟ್ರಕ್ಕೆ, ರಾಜ್ಯಕ್ಕೆ ತಾಲೂಕಿಗೆ ಕೀರ್ತಿ ತಂದಿರುವ ಹೆಮ್ಮೆಯ ಪುತ್ರನಾಗಿದ್ದಾರೆ. ಕಳೆದವಾರ ಚೀನಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಶರತ್ ಕೂದಳೆಯಷ್ಟು ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕ ಪಡೆದುಕೊಂಡು ದೇಶದ ಕೀರ್ತಿಯನ್ನು ಹೆಚಿಸಿದ್ದಾರೆ. ಇವರು ಉತ್ತಮ ಕ್ರೀಡಾಪಟುವಾಗಿ ವಿವಿಧ ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ದಿವ್ಯಾಂಗನಾಗಿದ್ದರೂ ಧೈರ್ಯವಾಗಿ ಮುನ್ನುಗ್ಗಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಸಾಧಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇತರೆ ವಿದ್ಯಾರ್ಥಿಗಳು ಶರತ್‌ನಂತೆ ಸಾಧನೆ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕೆಂದರು.ಬಾಕ್ಸ್............
ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಚಿನ್ನದ ಪದಕ ಪಡೆದವರಿಗೆ ಕ್ಲಾಸ್-1 ಮತ್ತು ಬೆಳ್ಳಿ ಪದಕ ಪಡೆದವರಿಗೆ ಕ್ಲಾಸ್-2 ಉದ್ಯೋಗವನ್ನು ಸರ್ಕಾರಿ ಇಲಾಖೆಗಳಲ್ಲಿ ನೇರ ನೇಮಕಾತಿ ಮೂಲಕ ನೀಡುವುದಾಗಿ ಮುಖ್ಯಮಂತ್ರಿಗಳೇ ಘೋಷಿಸಿದ್ದು, ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ತಾಲೂಕಿನ ಶರತ್ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದು, ಈತನಿಗೆ ಮುಖ್ಯಮಂತ್ರಿಗಳೇ ಹೇಳಿದಂತೆ ಸರ್ಕಾರಿ ಉದ್ಯೋಗ ನೀಡಿ ಒಲಂಪಿಕ್ ಮಟ್ಟದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು. ಲೋಕೇಶ್ವರ, ರಾಷ್ಟ್ರೀಯ ಖೋ-ಖೋ ಸಂಸ್ಥೆ ಉಪಾಧ್ಯಕ್ಷರು.ಶರತ್ ತಂದೆ ತಾಯಿಯರಾದ ಭಾಗ್ಯಮ್ಮ, ಶಂಕರಪ್ಪ ಮತ್ತು ಕುಟುಂಬ ವರ್ಗದವರು. ತಹಸೀಲ್ದಾರ್ ಪವನ್‌ಕುಮಾರ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಬಿಇಒ ಚಂದ್ರಯ್ಯ, ನಗರಸಭೆ ಸದಸ್ಯರಾದ ಸೊಪ್ಪುಗಣೇಶ್, ಭಾರತಿ, ಆಶೀಫಾಬಾನು, ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್, ಮುಖಂಡರಾದ ಡಾಬಾ ಶಿವಶಂಕರ್, ಕೆ.ಆರ್, ದೇವರಾಜು, ಬಸವರಾಜು, ಕುಮಾರ್, ವನಿತಾ ಪ್ರಸನ್ನ, ತರಕಾರಿ ಗಂಗಾಧರ್, ಗುರುಸ್ವಾಮಿ, ರೇಣು, ಪ್ರಭಾ ವಿಶ್ವನಾಥ್ ಭಾಗವಹಿಸಿದ್ದರು.
ಫೋಟೋ 4-ಟಿಪಿಟಿ1ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಪಡೆದ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್‌ಗೆ ಸನ್ಮಾನಿಸಿ ಮಾತನಾಡಿದ ತಿಪಟೂರು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ರಾಷ್ಟ್ರೀಯ ಖೋ-ಖೋ ಸಂಸ್ಥೆ ಉಪಾಧ್ಯಕ್ಷರಾದ ಲೋಕೇಶ್ವರ.