ಟಿ20ಯಲ್ಲಿ ಸೂರ್ಯ ವೇಗದ 2000 ರನ್‌!

| Published : Dec 13 2023, 01:00 AM IST

ಸಾರಾಂಶ

India's Stand-in Captain, World no.1 batter Suryakumar yadav fastest to reach 2000 runs in T20I in terms of Balls faced

ಗೆಬೆರ್ಹಾ: ವಿಶ್ವ ನಂ.1 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಟಿ20 ಕ್ರಿಕೆಟ್‌ನಲ್ಲಿ ಬೆಳಗುತ್ತಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿಕಡಿಮೆ ಎಸೆತಗಳನ್ನು ಎದುರಿಸಿ 2000 ರನ್‌ ಪೂರೈಸಿದ ದಾಖಲೆಯನ್ನು ಭಾರತ ಟಿ20 ತಂಡದ ಹಂಗಾಮಿ ನಾಯಕ ಬರೆದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಸೂರ್ಯ 15 ರನ್‌ ಗಳಿಸಿದಾಗ, 2000 ರನ್‌ ಮೈಲಿಗಲ್ಲು ತಲುಪಿದರು. ಎಸೆತಗಳನ್ನು ಎದುರಿಸಿದ ಆಧಾರದಲ್ಲಿ ಸೂರ್ಯ ಅತಿವೇಗವಾಗಿ 2000 ರನ್‌ ಗಳಿಸಿದ ದಾಖಲೆ ಬರೆದರು. ಸೂರ್ಯ 2000 ರನ್‌ ಪೂರೈಸಲು ತೆಗೆದುಕೊಂಡಿದ್ದು ಕೇವಲ 1164 ಎಸೆತಗಳನ್ನು. ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರೋನ್‌ ಫಿಂಚ್‌ 1283, ಗ್ಲೆನ್‌ ಮ್ಯಾಕ್ಸ್‌ವೆಲ್‌ 1304 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಅಂ.ರಾ. ಟಿ20ಯಲ್ಲಿ ಅತಿವೇಗವಾಗಿ 500, 1000, 1500 ರನ್‌ ಗಳಿಸಿದ ದಾಖಲೆಗಳೂ ಸೂರ್ಯ ಹೆಸರಲ್ಲೇ ಇವೆ. 291 ಎಸೆತದಲ್ಲಿ 500 ರನ್‌ ಪೂರೈಸಿದ್ದ ಸೂರ್ಯ, 1000 ರನ್‌ ಮೈಲಿಗಲ್ಲು ತಲುಪಲು 573 ಎಸೆತ ತೆಗೆದುಕೊಂಡಿದ್ದರು. 843 ಎಸೆತಗಳಲ್ಲಿ 1500 ರನ್‌ ಗಳಿಸಿದ್ದರು. ಮತ್ತೊಂದು ಆಸಕ್ತಿದಾಯಕ ವಿಷಯ ಎಂದರೆ, ಸೂರ್ಯ ತಮ್ಮ 500 ಹಾಗೂ 1000 ರನ್‌ಗಳ ಮೈಲಿಗಲ್ಲುಗಳನ್ನು ಬೌಂಡರಿ ಮೂಲಕ ತಲುಪಿದರೆ, 1500 ಹಾಗೂ 2000 ರನ್‌ಗಳನ್ನು ಸಿಕ್ಸರ್‌ ಮೂಲಕ ಪೂರೈಸಿದರು. ==

ವಿರಾಟ್‌ ದಾಖಲೆ ಸರಿಗಟ್ಟಿದ ಸೂರ್ಯ ಇನ್ನಿಂಗ್ಸ್‌ಗಳ ಆಧಾರದಲ್ಲಿ ಸೂರ್ಯ 2000 ರನ್‌ ತಲುಪಲು 56 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು. ವಿರಾಟ್‌ ಕೊಹ್ಲಿ ತಮ್ಮ 56ನೇ ಇನ್ನಿಂಗ್ಸಲ್ಲೇ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ಬಾಬರ್‌ ಆಜಂ ಹಾಗೂ ಮೊಹಮದ್‌ ರಿಜ್ವಾನ್‌ ಇಬ್ಬರೂ 52 ಇನ್ನಿಂಗ್ಸ್‌ಗಳಲ್ಲಿ 2000 ರನ್‌ ಪೂರೈಸಿದ್ದರು.==2000 ರನ್‌ ಪೂರೈಸಿದಭಾರತದ 4ನೇ ಕ್ರಿಕೆಟಿಗ ಅಂ.ರಾ.ಟಿ20ಯಲ್ಲಿ 2000 ರನ್‌ ಪೂರೈಸಿದ ಭಾರತದ 4ನೇ ಆಟಗಾರ ಸೂರ್ಯಕುಮಾರ್‌. ಸದ್ಯ ಅವರು 59 ಪಂದ್ಯಗಳ 56 ಇನ್ನಿಂಗ್ಸ್‌ಗಳಲ್ಲಿ 2041 ರನ್‌ ಗಳಿಸಿದ್ದಾರೆ. 3 ಶತಕ, 17 ಅರ್ಧಶತಕಗಳು ಅವರಿಂದ ಮೂಡಿಬಂದಿವೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌ ಇತರರು. ಕೊಹ್ಲಿ 115 ಪಂದ್ಯಗಳಿಂದ 4008 ರನ್‌ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 148 ಪಂದ್ಯಗಳಲ್ಲಿ 3853 ರನ್ ಗಳಿಸಿರುವ ರೋಹಿತ್‌ 2ನೇ ಸ್ಥಾನದಲ್ಲಿದ್ದಾರೆ. ರಾಹುಲ್‌ 72 ಪಂದ್ಯಗಳಲ್ಲಿ 2265 ರನ್‌ ಕಲೆಹಾಕಿದ್ದಾರೆ.