ಶಿಕ್ಷಣದಿಂದ ಸಾಮಾಜಿಕ ಸ್ಥಿರತೆ, ಅಭಿವೃದ್ಧಿ ಸಾಧ್ಯ

| Published : Oct 11 2023, 12:45 AM IST

ಶಿಕ್ಷಣದಿಂದ ಸಾಮಾಜಿಕ ಸ್ಥಿರತೆ, ಅಭಿವೃದ್ಧಿ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ತಳಕಲ್ ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳಲ್ಲಿನ 40 ಮಕ್ಕಳಿಗೆ ತಳಕಲ್ ಗ್ರಾಪಂ ಸದಸ್ಯ ಉಮೇಶಗೌಡ ಪೊಪಾ ಹಾಗು ಡಿ.ವಿರುಪಾಕ್ಷಗೌಡ ಸಮವಸ್ತ್ರ ವಿತರಣೆ ಮಾಡಿದರು.ತಳಕಲ್ ಗ್ರಾಮದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ನನ್ನ ತಾಯಿ ರತ್ಮಮ್ಮ ಆಸೆಯಂತೆ ನಾನು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದ್ದೇನೆ. ಕಾನ್ವೆಂಟ್ ಬದಲಾಗಿ ಅಂಗನವಾಡಿಗೆ ಮಕ್ಕಳನ್ನು ಕಲಿಕೆಗೆ ಎಲ್ಲರೂ ಕಳಿಸಬೇಕು. ಅಂಗನವಾಡಿ ಎಂಬುದು ಶಿಕ್ಷಣದ ಬುನಾದಿ ಇದ್ದಂತೆ. ಪ್ರತಿ ಮಗು ಅಂಗನವಾಡಿಯಲ್ಲಿ ಕಲಿಕೆ, ಕ್ರೀಯಾ ಚಟುವಟಿಕೆ ಜತೆಗೆ ಎಲ್ಲ ಮಕ್ಕಳ ಜತೆಗೆ ಬೇರೆಯುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಸ್ಥಿರತೆ ಹಾಗು ಅಭಿವೃದ್ಧಿ ಸಾಧ್ಯ ಎಂದರು.
ಕನ್ನಡಪ್ರಭ ವಾರ್ತೆ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳಲ್ಲಿನ 40 ಮಕ್ಕಳಿಗೆ ತಳಕಲ್ ಗ್ರಾಪಂ ಸದಸ್ಯ ಉಮೇಶಗೌಡ ಪೊಪಾ ಹಾಗು ಡಿ.ವಿರುಪಾಕ್ಷಗೌಡ ಸಮವಸ್ತ್ರ ವಿತರಣೆ ಮಾಡಿದರು. ತಳಕಲ್ ಗ್ರಾಮದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ನನ್ನ ತಾಯಿ ರತ್ಮಮ್ಮ ಆಸೆಯಂತೆ ನಾನು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದ್ದೇನೆ. ಕಾನ್ವೆಂಟ್ ಬದಲಾಗಿ ಅಂಗನವಾಡಿಗೆ ಮಕ್ಕಳನ್ನು ಕಲಿಕೆಗೆ ಎಲ್ಲರೂ ಕಳಿಸಬೇಕು. ಅಂಗನವಾಡಿ ಎಂಬುದು ಶಿಕ್ಷಣದ ಬುನಾದಿ ಇದ್ದಂತೆ. ಪ್ರತಿ ಮಗು ಅಂಗನವಾಡಿಯಲ್ಲಿ ಕಲಿಕೆ, ಕ್ರೀಯಾ ಚಟುವಟಿಕೆ ಜತೆಗೆ ಎಲ್ಲ ಮಕ್ಕಳ ಜತೆಗೆ ಬೇರೆಯುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಸ್ಥಿರತೆ ಹಾಗು ಅಭಿವೃದ್ಧಿ ಸಾಧ್ಯ ಎಂದರು. ಹಿರಿಯ ವಿರುಪಾಕ್ಷಗೌಡ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಆಗಬೇಕು. ಮಕ್ಕಳನ್ನು ಶಿಕ್ಷಣ ಎಂಬ ಜ್ಞಾನ ನೀಡಿ ಬೆಲೆ ಕಟ್ಟಲಾಗದ ಆಸ್ತಿಯನ್ನಾಗಿಸಬೇಕು. ಹಸಿವು, ಶಿಕ್ಷಣ, ಆರೋಗ್ಯಕ್ಕಾಗಿ ದೇಣಿಗೆ ಕೊಡುವುದು ರೂಢಿಯಾಗಬೇಕು. ಒಳ್ಳೆಯ ಕೆಲಸದಲ್ಲಿ ಪಾಲ್ಗೊಂಡು ಪ್ರತಿಯೊಬ್ಬರು ಖುಷಿಯಾಗಬೇಕು ಎಂದರು. ಕಲಿಕಾ ಜಿಲ್ಲಾ ಸಂಯೋಜಕ ಅಶೋಕ ಮಾತನಾಡಿ, ಅಂಗನವಾಡಿಗಳು ಕಲಿಕಾ ಕೇಂದ್ರಗಳಾಗಿ ಪರಿವರ್ತನೆ ಆಗಿವೆ. ಇದಕ್ಕೆ ಎಲ್ಲರ ಪರಿಶ್ರಮ ಕಾರಣ. ಮಕ್ಕಳ ಸಮಗ್ರ ಬೆಳವಣಿಗೆಗೆ ಪೋಷಕರ ಪಾತ್ರ ಸಹ ಮುಖ್ಯವಾಗಿದೆ. ಇಡೀ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆ ಮಾದರಿಯಾಗಿ ಪರಿವರ್ತನೆ ಆಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ತಂಡಗಳು ಶಾಲಾಪೂರ್ವ ಶಿಕ್ಷಣ ವೀಕ್ಷಣೆಗೆ ಇಲ್ಲಿಗೆ ಬರುತ್ತಿದ್ದಾರೆ.ಕಾರ್ಯಕರ್ತೆಯರ, ಸಹಾಯಕಿಯರ, ಮೇಲ್ವಿಚಾರಕಿಯರ, ಅಧಿಕಾರಿಗಳ ಪ್ರೋತ್ಸಾಹ, ಪರಿಶ್ರಮ ಇದಕ್ಕೆಲ್ಲ ಕಾರಣವಾಗಿದೆ. ಪಾಲಕರು ಮಕ್ಕಳಿಗೆ ಮೊಬೈಲ್ ನೀಡದೆ ನಾನಾ ಚಟುವಟಿಕೆಗಳನ್ನು ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿ ಮಾಡಿಸಬೇಕು. ಮಗುವಿನ ಸಾಮಾಜಿಕ, ಶೈಕ್ಷಣಿಕ, ಭಾವನಾತ್ಮಕ, ದೈಹಿಕ, ಗ್ರಹಣಶಕ್ತಿ ಬೆಳವಣಿಗೆ, ಆರೋಗ್ಯ, ಪೌಷ್ಟಿಕ ಮಟ್ಟ ಎಲ್ಲದರ ಬಗ್ಗೆ ಹೆಚ್ಚು ಗಮನ ಪ್ರತಿಯೊಬ್ಬರು ನೀಡಬೇಕು ಎಂದರು. ಗ್ರಾಪಂ ಉಪಾಧ್ಯೆಕ್ಷೆ ಜಿಂದಾಬಿ, ಗ್ರಾಪಂ ಸದಸ್ಯ ಶ್ರೀಧರ ಹಣವಾಳ, ಬಸನಗೌಡ ಪೊಲೀಸ ಪಾಟೀಲ್, ರತ್ನಮ್ಮ ಬಿ, ಕಾವ್ಯಾ ವಿರುಪಾಕ್ಷಗೌಡ, ಹಿರಿಯ ಮೇಲ್ವಿಚಾರಕಿ ಜಯಲಕ್ಷ್ಮೀ ಮೆಣಸಿನಕಾಯಿ ,ಸುನೀತಾ ಹೊಸಮಠ, ಸರ್ವಮಂಗಳಾ ಪತ್ತಾರ, ಜಯಲಕ್ಷ್ಮೀ ಇತರರಿದ್ದರು.