ಸಾರಾಂಶ
ಮೆಟ್ಟೂರು, ತಮಿಳುನಾಡುನಲ್ಲಿ ನಡೆದ ಮೊದಲ ದಕ್ಷಿಣ ಭಾರತ ಸಂಪ್ರದಾಯಿಕ ಹಿರಿಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡ 20 ಮಂದಿ ಕರ್ನಾಟಕದ ಕುಸ್ತಿಪಟುಗಳು ಪ್ರಾಬಲ್ಯ ಸಾಧಿಸಿದ್ದಾರೆ. ಕೂಟದಲ್ಲಿ 18 ಚಿನ್ನ ಹಾಗೂ 2 ಕಂಚಿನ ಪದಕ ಗೆದ್ದಿದ್ದಾರೆ.
ಈ ಮೂಲಕ ತಮ್ಮ ಕುಶಲತೆ ಮತ್ತು ದೃಢ ಸಂಕಲ್ಪವನ್ನು ಮೆರೆದಿದ್ದಾರೆ. ಕೂಟದಲ್ಲಿ ಕರ್ನಾಟಕದ 10 ಪುರುಷ ಹಾಗೂ 10 ಮಹಿಳಾ ಕುಸ್ತಿಪಟುಗಳು ಪಾಲ್ಗೊಂಡರು. ಕೂಟದಲ್ಲಿ ಅಪೂರ್ವ ಸಾಧನೆ ಸಾಧಿಸಿದ ತಂಡ 18 ಚಿನ್ನದ ಪದಕ ಮತ್ತು 2 ಕಂಚಿನ ಪದಕಗಳನ್ನು ಪಡೆದುಕೊಂಡಿತು.
ಈ ವಿಶೇಷ ಸಾಧನೆಗೆ ಕಾರಣರಾದ ಕುಸ್ತಿಪಟುಗಳು, ಅವರ ಕೋಚ್‌ಗಳು ಮತ್ತು ಅಧಿಕಾರಿಗಳಿಗೆ ಭಾರತೀಯರ ಕುಸ್ತಿ ಫೆಡರೇಶನ್ ಸಹ ಕಾರ್ಯದರ್ಶಿ ಬೆಲ್ಲಿಪ್ಪಾಡಿ ಗುಣರಂಜನ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.‘ಕರ್ನಾಟಕ ಕುಸ್ತಿಪಟುಗಳಿಗೆ ನಾವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಅವರ ಜಯವು ನಮ್ಮ ರಾಜ್ಯದಲ್ಲಿನ ಪ್ರತಿಭೆಯನ್ನು ಹೈಲೈಟ್ ಮಾಡುವುದಲ್ಲದೆ, ಭವಿಷ್ಯದ ಕುಸ್ತಿಪಟುಗಳಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳಿದ್ದಾರೆ.