ದಕ್ಷಿಣ ಭಾರತ ಕುಸ್ತಿ: ಕರ್ನಾಟಕಕ್ಕೆ ಪ್ರಶಸ್ತಿ

| Published : Jan 13 2024, 01:30 AM IST

ಸಾರಾಂಶ

ತಮಿಳುನಾಡಿನ ಈರೋಡ್‌ನಲ್ಲಿ ನಡೆದ ದಕ್ಷಿಣ ಭಾರತ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 8 ಚಿನ್ನ ಹಾಗೂ 2 ಬೆಳ್ಳಿ ಪದಕ ಲಭಿಸಿವೆ.

ಈರೋಡ್‌(ತಮಿಳುನಾಡು): ಇಲ್ಲಿ ನಡೆದ ದಕ್ಷಿಣ ಭಾರತ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಫ್ರೀಸ್ಟೈಲ್ ಪುರುಷರ ವಿಭಾಗದಲ್ಲಿ ರಾಜ್ಯಕ್ಕೆ 8 ಚಿನ್ನ ಹಾಗೂ 2 ಬೆಳ್ಳಿ ಪದಕ ಲಭಿಸಿತು. ಪದಕ ವಿಜೇತ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಬಿ.ಗಣರಂಜನ್ ಶೆಟ್ಟಿ ಅವರು ಪದಕ ತೊಡಿಸಿ, ಸಮಗ್ರ ಚಾಂಪಿಯನ್‌ ಪ್ರಶಸ್ತಿಯನ್ನು ನೀಡುವ ಮೂಲಕ ಅಭಿನಂದಿಸಿದರು. ಈ ವೇಳೆ ಕರ್ನಾಟಕ ಕುಸ್ತಿ ಸಂಘದ ಕಾರ್ಯದರ್ಶಿ ಜೆ.ಶ್ರೀನಿವಾಸ್‌, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಜಂಟಿ ಕಾರ್ಯಧರ್ಶಿ ಕೆ.ಕುಮಾರ್, ತಾಂತ್ರಿಕ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಉಪಸ್ಥಿತರಿದ್ದರು.

ಬೀಚ್‌ ಗೇಮ್ಸ್‌: ರಾಜ್ಯದಕಿಶನ್‌ಗೆ ಬಾಕ್ಸಿಂಗ್‌ ಚಿನ್ನಡಿಯು ದಾಮನ್‌: ಇಲ್ಲಿ ನಡೆದ ಚೊಚ್ಚಲ ಆವೃತ್ತಿಯ ರಾಷ್ಟ್ರೀಯ ಬೀಚ್‌ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕಿಶನ್‌ ರಾಜ್‌ ಬಾಕ್ಸಿಂಗ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಯಲಹಂಕದ ರೆವಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಕಿಶಾನ್‌, ಗುರುವಾರ ನಡೆದ ಅಂಡರ್‌-21 ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದರು. ಕ್ರೀಡಾಕೂಟದಲ್ಲಿ ಕರ್ನಾಟಕದ 10 ಮಂದಿ ಕ್ರೀಡಾಪಟುಗಳು ಭಾಗಿಯಾಗಿದ್ದರು. ಈ ಪೈಕಿ ಕಿಶನ್‌ ಪದಕಕ್ಕೆ ಕೊರಳೊಡ್ಡಿದ್ದಾರೆ. ಅವರು ಇತ್ತೀಚೆಗಷ್ಟೇ ಚಂಡೀಗಢದಲ್ಲಿ ನಡೆದ ನೈಋುತ್ಯ ವಲಯ ಅಂತರ್‌ ವಿವಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು.