ವಿಂಡೀಸನ್ನು 27 ರನ್‌ಗೆ ಆಲೌಟ್‌ ಮಾಡಿದ ಆಸೀಸ್‌!

| N/A | Published : Jul 16 2025, 12:45 AM IST / Updated: Jul 16 2025, 05:21 AM IST

West-Indies-vs-Australia-3rd-test-match

ಸಾರಾಂಶ

  ಆಸ್ಟ್ರೇಲಿಯಾದ ಮಾರಕ ಬೌಲಿಂಗ್‌ ದಾಳಿಗೆ ಧೂಳೀಪಟವಾದ ವೆಸ್ಟ್‌ಇಂಡೀಸ್‌, ಹಗಲು-ರಾತ್ರಿ ಮಾದರಿಯಲ್ಲಿ ನಡೆದ 3ನೇ ಟೆಸ್ಟ್‌ನ 2ನೇ ಇನ್ನಿಂಗ್ಸಲ್ಲಿ ಕೇವಲ 27 ರನ್‌ಗೆ ಆಲೌಟ್‌ ಆಗಿ ಮುಖಭಂಗಕ್ಕೊಳಗಾಯಿತು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ 2ನೇ ಕನಿಷ್ಠ ಮೊತ್ತ ಎನಿಸಿತು.

 ಕಿಂಗ್‌ಸ್ಟನ್‌: ಆಸ್ಟ್ರೇಲಿಯಾದ ಮಾರಕ ಬೌಲಿಂಗ್‌ ದಾಳಿಗೆ ಧೂಳೀಪಟವಾದ ವೆಸ್ಟ್‌ಇಂಡೀಸ್‌, ಹಗಲು-ರಾತ್ರಿ ಮಾದರಿಯಲ್ಲಿ ನಡೆದ 3ನೇ ಟೆಸ್ಟ್‌ನ 2ನೇ ಇನ್ನಿಂಗ್ಸಲ್ಲಿ ಕೇವಲ 27 ರನ್‌ಗೆ ಆಲೌಟ್‌ ಆಗಿ ಮುಖಭಂಗಕ್ಕೊಳಗಾಯಿತು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ 2ನೇ ಕನಿಷ್ಠ ಮೊತ್ತ ಎನಿಸಿತು.

2ನೇ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾವನ್ನು 121 ರನ್‌ಗೆ ಆಲೌಟ್‌ ಮಾಡಿದ ವಿಂಡೀಸ್‌ ಗೆಲ್ಲಲು 204 ರನ್‌ ಗುರಿ ಪಡೆಯಿತು. ಸಾಧಾರಣ ಗುರಿ ಬೆನ್ನತ್ತಲು ಕ್ರೀಸ್‌ಗಿಳಿದ ವಿಂಡೀಸ್‌ ಬ್ಯಾಟರ್‌ಗಳನ್ನು ಆಸ್ಟ್ರೇಲಿಯಾದ ವೇಗಿಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದರು. ಮೊದಲ ಓವರಲ್ಲೇ 3 ವಿಕೆಟ್‌: ಮಿಚೆಲ್‌ ಸ್ಟಾರ್ಕ್‌ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಕ್ಯಾಂಬೆಲ್‌ರನ್ನು ಔಟ್‌ ಮಾಡಿದರು. ಅಲ್ಲದೇ ಮೊದಲ ಓವರಲ್ಲಿ ವಿಂಡೀಸ್‌ ಖಾತೆ ತೆರೆಯದೆ 3 ವಿಕೆಟ್ ಕಳೆದುಕೊಂಡಿತು. 11 ರನ್‌ಗೆ 6 ವಿಕೆಟ್‌ ಕಳೆದುಕೊಂಡ ವಿಂಡೀಸ್‌, ಟೆಸ್ಟ್‌ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಆಲೌಟ್‌ ಆಗುವ ಭೀತಿಯಲ್ಲಿತ್ತು. ಆದರೆ ಜಸ್ಟಿನ್‌ ಗ್ರೀವ್ಸ್‌ರ 11 ರನ್‌, 6 ಇತರೆ ರನ್‌ ತಂಡವನ್ನು ಆ ಅವಮಾನದಿಂದ ಪಾರು ಮಾಡಿದರೂ, 27 ರನ್‌ಗೆ ಆಲೌಟ್‌ ಆದ ವಿಂಡೀಸ್‌ 2ನೇ ಕನಿಷ್ಠ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಯಿತು.

ಸ್ಟಾರ್ಕ್‌ 7.3 ಓವರಲ್ಲಿ 4 ಮೇಡನ್‌ ಸಹಿತ 9 ರನ್‌ಗೆ 6 ವಿಕೆಟ್‌ ಕಿತ್ತರೆ, ಸ್ಕಾಟ್‌ ಬೋಲೆಂಡ್‌ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ಹೇಜಲ್‌ವುಡ್‌ಗೆ 1 ವಿಕೆಟ್‌ ದೊರೆಯಿತು. 14.3 ಓವರಲ್ಲಿ ವಿಂಡೀಸ್‌ ಇನ್ನಿಂಗ್ಸ್‌ ಕೊನೆಗೊಂಡಿತು. 7 ಬ್ಯಾಟರ್‌ಗಳು ಡಕೌಟ್‌ ಆದರು. ಸ್ಕೋರ್‌: ಆಸ್ಟ್ರೇಲಿಯಾ 225 ಹಾಗೂ 121, ವಿಂಡೀಸ್‌ 143 ಹಾಗೂ 27---

ಟೆಸ್ಟ್‌ನಲ್ಲಿ ಕನಿಷ್ಠ ಮೊತ್ತ

ತಂಡರನ್‌ಎದುರಾಳಿಇನ್ನಿಂಗ್ಸ್‌ವರ್ಷ

ನ್ಯೂಜಿಲೆಂಡ್‌26ಇಂಗ್ಲೆಂಡ್‌3ನೇ1955

ವೆಸ್ಟ್‌ಇಂಡೀಸ್‌27ಆಸ್ಟ್ರೇಲಿಯಾ4ನೇ2025

ದ.ಆಫ್ರಿಕಾ30ಇಂಗ್ಲೆಂಡ್‌4ನೇ1896

ದ.ಆಫ್ರಿಕಾ30ಇಂಗ್ಲೆಂಡ್‌2ನೇ1924

ದ.ಆಫ್ರಿಕಾ35ಇಂಗ್ಲೆಂಡ್‌4ನೇ1899

07 ಡಕೌಟ್‌

ವಿಂಡೀಸ್‌ನ 2ನೇ ಇನ್ನಿಂಗ್ಸಲ್ಲಿ 7 ಬ್ಯಾಟರ್‌ಗಳು ಡಕೌಟ್‌ ಆದರು. ಟೆಸ್ಟ್‌ ಇತಿಹಾಸದಲ್ಲೇ ಇದು ಗರಿಷ್ಠ. ಈ ಹಿಂದೆ 5 ಬೇರೆ ಬೇರೆ ತಂಡಗಳು ತಲಾ 6 ಡಕೌಟ್‌ಗಳಿಗೆ ಸಾಕ್ಷಿಯಾಗಿದ್ದವು.12ನೇ ಹ್ಯಾಟ್ರಿಕ್‌

ಸ್ಕಾಟ್‌ ಬೋಲೆಂಡ್‌ ಪಡೆದ ಹ್ಯಾಟ್ರಿಕ್‌ ವಿಕೆಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಬೌಲರ್‌ನಿಂದ ದಾಖಲಾದ 12ನೇ ಹ್ಯಾಟ್ರಿಕ್‌. ಬೋಲೆಂಡ್‌ ಹ್ಯಾಟ್ರಿಕ್‌ ಪಡೆದ 10ನೇ ಆಸೀಸ್‌ ಬೌಲರ್‌. 

100ನೇ ಟೆಸ್ಟ್‌ನಲ್ಲಿ 400

ವಿಕೆಟ್‌ ಪೂರೈಸಿದ ಸ್ಟಾರ್ಕ್‌!

ಆಸ್ಟ್ರೇಲಿಯಾದ ದಿಗ್ಗಜ ವೇಗಿ ಮಿಚೆಲ್‌ ಸ್ಟಾರ್ಕ್‌ ತಮ್ಮ 100ನೇ ಟೆಸ್ಟ್‌ನಲ್ಲಿ 400 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ವಿಂಡೀಸ್‌ನ ಆರಂಭಿಕ ಬ್ಯಟರ್‌ ಮಿಕೈಲ್‌ ಲೂಯಿ, ಸ್ಟಾರ್ಕ್‌ರ 400ನೇ ಬಲಿ ಎನಿಸಿದರು. 400 ಟೆಸ್ಟ್‌ ವಿಕೆಟ್‌ ಪಡೆದ ವಿಶ್ವದ 18ನೇ, ವೇಗದ ಬೌಲರ್‌ಗಳ ಪೈಕಿ 11ನೇ ಆಟಗಾರ ಎನಿಸಿದರು. ಈ ಮೈಲಿಗಲ್ಲು ತಲುಪಿದ ಆಸ್ಟ್ರೇಲಿಯಾದ ಕೇವಲ 4ನೇ ಬೌಲರ್‌ ಎನ್ನುವ ಹಿರಿಮೆಗೂ ಪಾತ್ರರಾದರು.--15 ಎಸೆತದಲ್ಲಿ 5 ವಿಕೆಟ್‌:

ಸ್ಟಾರ್ಕ್‌ ವಿಶ್ವ ದಾಖಲೆ!

ಟೆಸ್ಟ್‌ನಲ್ಲಿ ಅತಿವೇಗದ 5 ವಿಕೆಟ್‌ ಗೊಂಚಲು ಪಡೆದ ವಿಶ್ವದಾಖಲೆಯನ್ನು ಸ್ಟಾರ್ಕ್‌ ಬರೆದರು. ಕೇವಲ 15 ಎಸೆತದಲ್ಲಿ ಅವರು 5 ವಿಕೆಟ್‌ ಕಬಳಿಸಿ, ತಲಾ 19 ಎಸೆತಗಳಲ್ಲಿ 5 ವಿಕೆಟ್‌ ಪಡೆದಿದ್ದ ಆಸ್ಟ್ರೇಲಿಯಾದ ಎರ್ನಿ ತೊಷಾಕ್‌, ಸ್ಕಾಟ್‌ ಬೋಲೆಂಡ್‌ ಹಾಗೂ ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ರ ದಾಖಲೆಯನ್ನು ಮುರಿದರು.

Read more Articles on