ಸಾರಾಂಶ
ಬೆಂಗಳೂರು: ಇತ್ತೀಚೆಗೆ ನಗರದ ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಸಬ್ ಜೂನಿಯರ್ ಹಾಗೂ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಅನೆಪ್ಪ ಸೆಂಟರ್ ಆಫ್ ಎಕ್ಸಲೆನ್ಸ್(ಎಸಿಇ) ಕ್ಲಬ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡ ಲ್ಯಾಂಡ್‌ಮಾರ್ಕ್ ಶಾಲೆಯ ಜಸ್ ಸಿಂಗ್ 5 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದು, 2ಸಿ ಗುಂಪಿನಲ್ಲಿ ವೈಯಕ್ತಿಕ ಚಾಂಪಿಯನ್ ಆಗಿಯೂ ಹೊರಹೊಮ್ಮಿದ್ದಾರೆ. ಧ್ರುತಿ ಕೆ. 3 ಚಿನ್ನ ಹಾಗೂ 2 ಬೆಳ್ಳಿ ಗೆದ್ದಿದ್ದಾರೆ. ವಿಬ್ಜಿಯೋರ್ ಹೊರಮಾವು ಶಾಲೆಯ ಅಥರ್ವ್ ಪಾಲ್ ಸಿಂಗ್ ರಾಥೋಡ್ 4 ಬೆಳ್ಳಿ ಹಾಗೂ 1 ಕಂಚು, ಕಸ್ತೂರಿ ನಗರದ ಪ್ರೆಸಿಡೆನ್ಸಿ ಶಾಲೆಯ ರಕ್ಷಣ್ ಪಿ. 1 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿದ್ದಾರೆ.
ಕ್ಲಬ್ ಇತ್ತೀಚೆಗಷ್ಟೇ ಅಕ್ಷಯ ನಗರದಲ್ಲಿ ಆರಂಭಗೊಂಡಿದ್ದು, ಕಡಿಮೆ ಅವಧಿಯಲ್ಲೇ ಕ್ಲಬ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕ್ಲಬ್ ಪಾಲ್ಗೊಂಡ ಚೊಚ್ಚಲ ಚಾಂಪಿಯನ್‌ಶಿಪ್‌ನಲ್ಲೇ 9 ಚಿನ್ನ ಸೇರಿದಂತೆ 20ಕ್ಕೂ ಹೆಚ್ಚು ಪದಕಗಳನ್ನು ತನ್ನದಾಗಿಸಿಕೊಂಡಿದೆ. ರಾಜ್ಯ ಮಟ್ಟದ ಸಬ್ ಜೂನಿಯರ್ ಹಾಗೂ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಪದಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕ್ಲಬ್‌ನ ನಿರ್ದೇಶಕ ಪ್ರದೀಪ್ ಕುಮಾರ್ ಹಾಗೂ ಮುಖ್ಯ ಕೋಚ್ ಭೂಪಿಂದರ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.