ಸಾರಾಂಶ
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆಸ್ಟ್ರೇಲಿಯಾದ ತಾರಾ ಬ್ಯಾಟರ್ ಡೇವಿಡ್ ವಾರ್ನರ್ ಸ್ಥಾನದಲ್ಲಿ ಆರಂಭಿಕನಾಗಿ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಆಡಲಿರುವ ಸುಳಿವು ಸಿಕ್ಕಿದೆ.
ಮೆಲ್ಬರ್ನ್: ಜ.17ರಿಂದ ತವರಿನಲ್ಲಿ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕನಾಗಿ ಸ್ಟೀವ್ ಸ್ಮಿತ್ ಆಡುವ ಸಾಧ್ಯತೆ ಇದೆ.
ಇತ್ತೀಚೆಗೆ ಡೇವಿಡ್ ವಾರ್ನರ್‌ರ ನಿವೃತ್ತಿಯಿಂದಾಗಿ ತೆರವುಗೊಂಡಿರುವ ಸ್ಥಾನವನ್ನು ತನ್ನ ಹಿರಿಯ ಆಟಗಾರನಿಗೆ ನೀಡಲು ತಂಡದ ಆಡಳಿತ ನಿರ್ಧರಿಸಿದೆ ಎನ್ನಲಾಗಿದೆ.
ಟೆಸ್ಟ್ ರ್‍ಯಾಂಕಿಂಗ್: 6ನೇ ಸ್ಥಾನಕ್ಕೇರಿದ ವಿರಾಟ್!
ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ, ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನ ಏರಿಕೆ ಕಂಡು 6ನೇ ಸ್ಥಾನ ತಲುಪಿದ್ದಾರೆ.
ಇನ್ನು ನಾಯಕ ರೋಹಿತ್ ಶರ್ಮಾ ಅಗ್ರ-10ರ ಪಟ್ಟಿಗೆ ಪ್ರವೇಶಿಸಿದ್ದು, 4 ಸ್ಥಾನಗಳ ಏರಿಕೆಯೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ. ಬೌಲರ್ ಪಟ್ಟಿಯಲ್ಲಿ ಆರ್.ಅಶ್ವಿನ್ ಅಗ್ರಸ್ಥಾನ ಕಾಯ್ದುಕೊಂಡರೆ, ಜಸ್‌ಪ್ರೀತ್ ಬೂಮ್ರಾ ಒಂದು ಸ್ಥಾನ ಏರಿಕೆ ಕಂಡು 5ನೇ ಸ್ಥಾನ ಪಡೆದಿದ್ದಾರೆ. 13 ಸ್ಥಾನ ಜಿಗಿದಿರುವ ಮೊಹಮದ್ ಸಿರಾಜ್, 17ನೇ ಸ್ಥಾನದಲ್ಲಿದ್ದಾರೆ.