ಟೆನಿಸ್‌ ವಿಶ್ವ ರ್‍ಯಾಂಕಿಂಗ್‌: 68ನೇ ಸ್ಥಾನಕ್ಕೇರಿದ ಭಾರತದ ಸುಮಿತ್‌ ನಗಾಲ್‌

| Published : Jul 17 2024, 12:47 AM IST

ಟೆನಿಸ್‌ ವಿಶ್ವ ರ್‍ಯಾಂಕಿಂಗ್‌: 68ನೇ ಸ್ಥಾನಕ್ಕೇರಿದ ಭಾರತದ ಸುಮಿತ್‌ ನಗಾಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಯುವ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಯಶಸ್ಸಿನ ಓಟ ಮುಂದುವರಿಕೆ. ಎಟಿಪಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 68ನೇ ಸ್ಥಾನಕ್ಕೇರಿದ ನಗಾಲ್‌. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆ.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಯುವ ಟೆನಿಸಿಗ ಸುಮಿತ್‌ ನಗಾಲ್‌, ಎಟಿಪಿ ಸಿಂಗಲ್ಸ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ವೃತ್ತಿಬದುಕಿನ 68ನೇ ಸ್ಥಾನಕ್ಕೇರಿದ್ದಾರೆ. 26 ವರ್ಷದ ನಗಾಲ್‌, ಸೋಮವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 5 ಸ್ಥಾನ ಏರಿಕೆ ಕಂಡಿದ್ದಾರೆ. ಈ ಮೊದಲು 71ನೇ ಸ್ಥಾನ ಪಡೆದಿದ್ದು ಅವರ ಶ್ರೇಷ್ಠ ಸಾಧನೆ ಎನಿಸಿತ್ತು. 1973ರಿಂದೀಚೆಗೆ ಪುರುಷರ ಸಿಂಗಲ್ಸ್‌ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಅತ್ಯುತ್ತಮ ಸ್ಥಾನ ಪಡೆದ ಭಾರತೀಯ ಎನ್ನುವ ಹಿರಿಮೆಗೆ ನಗಾಲ್‌ ಪಾತ್ರರಾಗಿದ್ದಾರೆ. 71ನೇ ಸ್ಥಾನ ಪಡೆದಿದ್ದ ಶಶಿ ಮೆನನ್‌ರನ್ನು ನಗಾಲ್‌ ಹಿಂದಿಕ್ಕಿದ್ದಾರೆ. ವಿಜಯ್‌ ಅಮೃತ್‌ರಾಜ್‌ (1980ರಲ್ಲಿ 18ನೇ ಸ್ಥಾನ), ರಮೇಶ್‌ ಕೃಷ್ಣನ್‌ (1985ರಲ್ಲಿ 23ನೇ ಸ್ಥಾನ), ಸೋಮ್‌ದೇವ್‌ ದೇವರ್ಮನ್‌ (2011ರಲ್ಲಿ 62ನೇ ಸ್ಥಾನ) ನಗಾಲ್‌ಗಿಂತ ಉತ್ತಮ ಸ್ಥಾನ ಪಡೆದ ಭಾರತೀಯ ಟೆನಿಸಿಗರೆನಿಸಿದ್ದಾರೆ.