ಟೆನಿಸ್‌ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 71ನೇ ಸ್ಥಾನಕ್ಕೆ ಜಿಗಿದ ಭಾರತದ ಸುಮಿತ್‌ ನಗಾಲ್‌. ಇಟಲಿಯ ಪೆರುಗಿಯಾ ಟೂರ್ನಿಯಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದ ನಗಾಲ್‌.

ನವದೆಹಲಿ: ಇಟಲಿಯ ಪೆರುಗಿಯಾ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದ ಭಾರತದ ಸುಮಿತ್‌ ನಗಾಲ್‌, ಎಟಿವಿ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 71ನೇ ಸ್ಥಾನಕ್ಕೆ ಜಿಗಿದಿದ್ದಾರೆ.

 ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ನಗಾಲ್‌, ಸ್ಥಳೀಯ ಆಟಗಾರ ಲೂಸಿಯಾನೋ ವಿರುದ್ಧ 1-6, 2-6 ನೇರ ಸೆಟ್‌ಗಳಲ್ಲಿ ಸೋಲುಂಡರು. ಕಳೆದ ವಾರ 77ನೇ ಸ್ಥಾನದಲ್ಲಿದ್ದ ನಗಾಲ್‌ ಮುಂಬರುವ ವಿಂಬಲ್ಡನ್‌ನ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ನ ಸಿಂಗಲ್ಸ್‌ ಸ್ಪರ್ಧೆಗೆ ಪ್ರವೇಶ ಪಡೆದಿರುವ ಭಾರತದ ಏಕೈಕ ಟೆನಿಸಿಗ ಎನಿಸಿದ್ದಾರೆ.