ಸಾರಾಂಶ
ಹೈದರಾಬಾದ್: ಅಭಿಷೇಕ್ ಶರ್ಮಾ ಸ್ಫೋಟಕ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 4 ವಿಕೆಟ್ ಗೆಲುವು ಸಾಧಿಸಿದೆ.
ಪಂಜಾಬ್ ಕಿಂಗ್ಸ್ 9 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನೊಂದಿಗೆ ಪ್ಲೇ-ಆಫ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿತು.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗೆ 214 ರನ್ ಕಲೆಹಾಕಿತು. ಪ್ರಭ್‌ಸಿಮ್ರನ್ ಸಿಂಗ್ 71, ರೈಲಿ ರುಸೌ 49, ಅಥರ್ವ ತೈಡೆ 46, ನಾಯಕ ಜಿತೇಶ್ ಶರ್ಮಾ ಔಟಾಗದೆ 32 ರನ್ ಸಿಡಿಸಿದರು.
ಬೃಹತ್ ಗುರಿ ಸಿಕ್ಕರೂ ಸನ್‌ರೈಸರ್ಸ್ 19.1 ಓವರಲ್ಲಿ ಜಯಭೇರಿ ಬಾರಿಸಿತು. ಮತ್ತೆ ಅಬ್ಬರಿಸಿದ ಅಭಿಷೇಕ್ 28 ಎಸೆತಗಳಲ್ಲಿ 66 ರನ್ ಸಿಡಿಸಿ ಮತ್ತೊಮ್ಮೆ ಗೆಲುವಿನ ರೂವಾರಿ ಎನಿಸಿಕೊಂಡರು. ಹೇನ್ರಿಚ್ ಕ್ಲಾಸೆನ್ 42, ನಿತೀಶ್ ರೆಡ್ಡಿ 37, ರಾಹುಲ್ ತ್ರಿಪಾಠಿ 18 ಎಸೆತಗಳಲ್ಲಿ 33 ರನ್ ಕೊಡುಗೆ ನೀಡಿದರು.
ಸ್ಕೋರ್: ಪಂಜಾಬ್ 20 ಓವರಲ್ಲಿ 214/5 (ಪ್ರಭ್‌ಸಿಮ್ರನ್ 71, ರುಸೌ 49, ನಟರಾಜನ್ 2-33), ಸನ್‌ರೈಸರ್ಸ್ 19.1 ಓವರಲ್ಲಿ 215/6 (ಅಭಿಷೇಕ್ 66, ಕ್ಲಾಸೆನ್ 42, ಅರ್ಶ್‌ದೀಪ್ 2-37) ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮಾ