ಫೆ.25ರಂದು ಬೆಂಗಳೂರಿನಲ್ಲಿ ಸೂಪರ್‌ ಕ್ರಾಸ್‌ ಲೀಗ್‌ ಫಿನಾಲೆ

| Published : Feb 22 2024, 01:45 AM IST

ಫೆ.25ರಂದು ಬೆಂಗಳೂರಿನಲ್ಲಿ ಸೂಪರ್‌ ಕ್ರಾಸ್‌ ಲೀಗ್‌ ಫಿನಾಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸೂಪರ್‌ ಕ್ರಾಸ್‌ ರೇಸಿಂಗ್ ಲೀಗ್ (ಐಎಸ್ಆರ್‌ಎಲ್) ಗ್ರ್ಯಾಂಡ್ ಫಿನಾಲೆಯು ಫೆ.25ರಂದು ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆಯಲಿದೆ. ಇದು ವಿಶ್ವದ ಮೊದಲ ಫ್ರ್ಯಾಂಚೈಸಿ ಆಧಾರಿತ ಸೂಪರ್‌ ಕ್ರಾಸ್‌ ಲೀಗ್ ಆಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಸೂಪರ್‌ ಕ್ರಾಸ್‌ ರೇಸಿಂಗ್ ಲೀಗ್ (ಐಎಸ್ಆರ್‌ಎಲ್) ಗ್ರ್ಯಾಂಡ್ ಫಿನಾಲೆಯು ಫೆ.25ರಂದು ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆಯಲಿದೆ. ಇದು ವಿಶ್ವದ ಮೊದಲ ಫ್ರ್ಯಾಂಚೈಸಿ ಆಧಾರಿತ ಸೂಪರ್‌ ಕ್ರಾಸ್‌ ಲೀಗ್ ಆಗಿದ್ದು, ಬಿಬಿ ರೇಸಿಂಗ್‌, ಎಸ್‌ಜಿ ಸ್ಪೀಡ್‌ ರೇಸರ್ಸ್‌, ಗುಜರಾತ್‌ ಟ್ರಯ್ಲ್‌ ಬ್ಲೇಜರ್ಸ್‌, ಬಿಗ್‌ರಾಕ್‌ ಮೋಟಾರ್‌ ಸ್ಪೋರ್ಟ್ಸ್‌, ಮೋಹಿತೆ ರೇಸಿಂಗ್ ಟೀಮ್‌, ರೈಸ್‌ ಮೋಟೊ ಸ್ಪೋರ್ಟ್ಸ್‌ ತಂಡಗಳು ವಿವಿಧ ವಿಭಾಗಗಳಲ್ಲಿ ಹಣಾಹಣಿ ನಡೆಸಲಿವೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಲೀಗ್‌ನ ಸಹ ಸಂಸ್ಥಾಪಕ ವೀರ್‌ ಪಟೇಲ್‌, ಪುಣೆ ಹಾಗೂ ಅಹಮದಾಬಾದ್‌ ಚರಣಗಳು ಅತ್ಯುತ್ತಮ ಸ್ಪರ್ಧೆಗೆ ಸಾಕ್ಷಿಯಾದವು. ಬೆಂಗಳೂರಿನ ರೇಸಿಂಗ್‌ ಅಭಿಮಾನಿಗಳಿಗೂ ಭರಪೂರ ಮನರಂಜನೆ ಸಿಗುವುದರಲ್ಲಿ ಅನುಮಾನವಿಲ್ಲ ಎಂದರು.ಲೀಗ್‌ನಲ್ಲಿ ಒಟ್ಟು 6 ತಂಡಗಳಿದ್ದು, ಪ್ರತಿ ತಂಡದಲ್ಲೂ 8 ಜನ ಸ್ಪರ್ಧಿಗಳಿರಲಿದ್ದಾರೆ. ಭಾರತ ಸೇರಿ ವಿಶ್ವದ ಬೇರೆ ಬೇರೆ ದೇಶಗಳ 48 ಅಗ್ರ ರೈಡರ್‌ಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ. 450 ಸಿಸಿ, 250 ಸಿಸಿ ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ರೈಡರ್ಸ್, 250 ಸಿಸಿ ವಿಭಾಗದಲ್ಲಿ ಇಂಡಿಯಾ-ಏಷ್ಯಾ ಮಿಕ್ಸ್ ಮತ್ತು 85 ಸಿಸಿ ವಿಭಾಗದಲ್ಲಿ ಕಿರಿಯರು ಟ್ರೋಫಿಗಾಗಿ ಸ್ಪರ್ಧೆ ನಡೆಸಲಿದ್ದಾರೆ ಎಂದು ತಿಳಿಸಿದರು.