ಐಸಿಸಿ ಟಿ20 ವಿಶ್ವಕಪ್‌: ಸೂಪರ್‌-8 ಸೆಣಸಾಟ ಬಾಕಿ

| Published : Jun 18 2024, 12:53 AM IST / Updated: Jun 18 2024, 04:33 AM IST

ಸಾರಾಂಶ

ಟಿ20 ವಿಶ್ವಕಪ್‌ನ ಸೂಪರ್‌-8 ಸೆಣಸಾಟಕ್ಕೆ ಅಂತಿಮವಾಯ್ತು ತಂಡಗಳು. ಭಾರತಕ್ಕೆ ಮೊದಲ ಪಂದ್ಯದಲ್ಲಿ ಎದುರಾಗಲಿದೆ ಆಫ್ಘನ್‌ ಸವಾಲು. ನಾಳೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಮೆರಿಕ ಚಾಲೆಂಜ್‌.

ಬೆಂಗಳೂರು: ಇದೇ ಮೊದಲ ಬಾರಿಗೆ 20 ತಂಡಗಳೊಂದಿಗೆ ಶುರುವಾಗಿದ್ದ ಐಸಿಸಿ ಟಿ20 ವಿಶ್ವಕಪ್‌ನಲ್ಲೀಗ ಕೇವಲ 8 ತಂಡಗಳು ಉಳಿದುಕೊಂಡಿವೆ. 

ಗುಂಪು ಹಂತದ ಸೆಣಸಾಟದಲ್ಲಿ ಕೆಲ ತಂಡಗಳು ಅಧಿಕಾರಯುತ ಪ್ರದರ್ಶನ ತೋರಿ, ಅಜೇಯವಾಗಿ ಸೂಪರ್‌-8 ಹಂತಕ್ಕೇರಿದರೆ, ಕೆಲ ತಂಡಗಳಿಗೆ ಉತ್ತಮ ಆಟದ ಜೊತೆ ಅದೃಷ್ಟವೂ ಕೈಹಿಡಿದಿದೆ. 

ಬುಧವಾರ (ಜೂ.19)ದಿಂದ ಸೂಪರ್‌-8 ಹಂತ ಆರಂಭಗೊಳ್ಳಲಿದ್ದು, ಈ ಹಂತದಲ್ಲಿ ಸೆಣಸಲಿರುವ ಎಲ್ಲಾ 8 ತಂಡಗಳು ಅಂತಿಮಗೊಂಡಿವೆ. ಮಾದರಿ ಹೇಗೆ?: ಸೂಪರ್‌-8 ಹಂತದಲ್ಲಿ ತಲಾ 4 ತಂಡಗಳ ಒಟ್ಟು 2 ಗುಂಪುಗಳು ಇರಲಿದ್ದು, ಪ್ರತಿ ತಂಡವು ಗುಂಪಿನಲ್ಲಿರುವ ಇನ್ನುಳಿದ 3 ತಂಡಗಳ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ. ಸೂಪರ್‌-8 ಹಂತದದಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳಿಗೂ ಕೆರಿಬಿಯನ್‌ ದ್ವೀಪರಾಷ್ಟ್ರಗಳ ನಗರಗಳೇ ಆತಿಥ್ಯ ವಹಿಸಲಿವೆ. ಸೂಪರ್‌-8 ಪ್ರವೇಶಿಸಿರುವ ತಂಡಗಳು

ಗುಂಪು ‘1’

ಭಾರತ (ಎ1), ಆಸ್ಟ್ರೇಲಿಯಾ (ಬಿ2), ಅಫ್ಘಾನಿಸ್ತಾನ (ಸಿ1), ಬಾಂಗ್ಲಾದೇಶ (ಡಿ2)ಗುಂಪು ‘2’

ಅಮೆರಿಕ (ಎ2), ಇಂಗ್ಲೆಂಡ್‌ (ಬಿ1), ವೆಸ್ಟ್‌ಇಂಡೀಸ್‌ (ಸಿ2), ದಕ್ಷಿಣ ಆಫ್ರಿಕಾ (ಡಿ1)

--ಗುಂಪಲ್ಲಿ ಆಸೀಸ್‌ ಅಗ್ರಸ್ಥಾನ

ಪಡೆದರೂ ‘ಬಿ2’ ಸ್ಥಾನ ಏಕೆ?

ವಿಶ್ವಕಪ್‌ ಆರಂಭಕ್ಕೂ ಮೊದಲೇ ಅಗ್ರ-8 ತಂಡಗಳಿಗೆ ಶ್ರೇಯಾಂಕಗಳನ್ನು ನಿಗದಿಪಡಿಸಲಾಗಿತ್ತು. ತಂಡಗಳ ಪ್ರಯಾಣ ವ್ಯವಸ್ಥೆ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಂಡಗಳ ಪಂದ್ಯಗಳಿಗೆ ಟಿಕೆಟ್‌ ಖರೀದಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಶ್ರೇಯಾಂಕಗಳು ಪೂರ್ವ ನಿಗದಿಪಡಿಸಲಾಗಿತ್ತು. ಆ ಪ್ರಕಾರ, ಭಾರತ ‘ಎ1’, ಪಾಕಿಸ್ತಾನ ‘ಎ2’, ಇಂಗ್ಲೆಂಡ್‌ ‘ಬಿ1’, ಆಸ್ಟ್ರೇಲಿಯಾ ‘ಬಿ2’, ನ್ಯೂಜಿಲೆಂಡ್‌ ‘ಸಿ1’, ವೆಸ್ಟ್‌ಇಂಡೀಸ್‌ ‘ಸಿ2’, ದಕ್ಷಿಣ ಆಫ್ರಿಕಾ ‘ಡಿ1’, ಶ್ರೀಲಂಕಾ ‘ಡಿ2’ ಆಗಿದ್ದವು. ಒಂದು ವೇಳೆ ಗುಂಪಿನಲ್ಲಿ ನಿಗದಿತ ಸ್ಥಾನವನ್ನು ಬೇರೆ ತಂಡಗಳು ಪಡೆದರೆ, ಆ ಶ್ರೇಯಾಂಕ ಆ ತಂಡಕ್ಕೆ ನೀಡಲಾಗುತ್ತದೆ. ಉದಾಹರಣೆಗೆ ‘ಸಿ’ ಗುಂಪಿನಲ್ಲಿದ್ದ ನ್ಯೂಜಿಲೆಂಡ್‌ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ, ಆ ಸ್ಥಾನ ಆಫ್ಘನ್‌ ಪಾಲಾಗಿದೆ. ಅದೇ ರೀತಿ ಪಾಕಿಸ್ತಾನ ಹೊರಬಿದ್ದ ಕಾರಣ, ಆ ಸ್ಥಾನ ಅಮೆರಿಕಕ್ಕೆ ಸಿಕ್ಕಿದೆ. ಇನ್ನು ‘ಬಿ’ ಗುಂಪಿನಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನ ಪಡೆದರೂ, ತಂಡಕ್ಕೆ ‘ಬಿ2’ ಶ್ರೇಯಾಂಕ ನೀಡಿದ್ದಾಗಿದ್ದ ಕಾರಣ, ಆಸೀಸ್‌ ಸೂಪರ್‌-8 ಹಂತವನ್ನು ‘ಬಿ2’ ಆಗಿಯೇ ಪ್ರವೇಶ ಮಾಡಲಿದೆ.---

ಸೂಪರ್‌-8 ವೇಳಾಪಟ್ಟಿ

ದಿನಾಂಕಪಂದ್ಯಸ್ಥಳಸಮಯ (*ಭಾರತೀಯ ಕಾಲಮಾನ)

ಜೂ.19ದ.ಆಫ್ರಿಕಾ vs ಅಮೆರಿಕ ನಾರ್ಥ್‌ ಸೌಂಡ್‌ರಾ.8ಕ್ಕೆ

ಜೂ.20ವಿಂಡೀಸ್‌ vs ಇಂಗ್ಲೆಂಡ್‌ಗ್ರಾಸ್‌ ಐಲೆಟ್‌ಬೆ.6ಕ್ಕೆ

ಜೂ.20ಭಾರತ vs ಆಫ್ಘನ್‌ಬ್ರಿಡ್ಜ್‌ಟೌನ್‌ರಾ.8ಕ್ಕೆ

ಜೂ.21ಆಸ್ಟ್ರೇಲಿಯಾ vs ಬಾಂಗ್ಲಾನಾರ್ಥ್‌ಸೌಂಡ್‌ಬೆ.6ಕ್ಕೆ

ಜೂ.21ಇಂಗ್ಲೆಂಡ್‌ vs ದ.ಆಫ್ರಿಕಾಗ್ರಾಸ್‌ ಐಲೆಟ್‌ರಾ.8ಕ್ಕೆ

ಜೂ.22ವಿಂಡೀಸ್‌ vs ಅಮೆರಿಕಬ್ರಿಡ್ಜ್‌ಟೌನ್‌ಬೆ.6ಕ್ಕೆ

ಜೂ.22ಭಾರತ vs ಬಾಂಗ್ಲಾನಾರ್ಥ್‌ಸೌಂಡ್‌ರಾ.8ಕ್ಕೆ

ಜೂ.23ಆಫ್ಘನ್‌ vs ಆಸ್ಟ್ರೇಲಿಯಾಕಿಂಗ್‌ಸ್ಟನ್‌ಬೆ.6ಕ್ಕೆ

ಜೂ.23ಇಂಗ್ಲೆಂಡ್‌ vs ಅಮೆರಿಕಬ್ರಿಡ್ಜ್‌ಟೌನ್‌ರಾ.8ಕ್ಕೆ

ಜೂ.24ವಿಂಡೀಸ್‌ vs ದ.ಆಫ್ರಿಕಾನಾರ್ಥ್‌ಸೌಂಡ್‌ಬೆ.6ಕ್ಕೆ

ಜೂ.24ಭಾರತ vs ಆಸ್ಟ್ರೇಲಿಯಾಗ್ರಾಸ್‌ ಐಲೆಟ್‌ರಾ.8ಕ್ಕೆ

ಜೂ.25ಆಫ್ಘನ್‌ vs ಬಾಂಗ್ಲಾಕಿಂಗ್‌ಸ್ಟನ್‌ಬೆ.6ಕ್ಕೆ