ಸಾರಾಂಶ
ಐಸಿಸಿ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಪ್ರಕಟ. ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್, ದ.ಆಫ್ರಿಕಾಕ್ಕೆ ಏಡನ್ ಮಾರ್ಕ್‌ರಮ್ ನಾಯಕ. ಇಂಗ್ಲೆಂಡ್ ತಂಡದಲ್ಲಿ ಟಿ20 ತಜ್ಞ ಬ್ಯಾಟರ್‌ಗಳ ದಂಡು. ದ.ಆಫ್ರಿಕಾ ತಂಡದಲ್ಲಿ ಇಬ್ಬರು ಹೊಸ ಪ್ರತಿಭೆಗಳಿಗೆ ಸ್ಥಾನ.
ಐಸಿಸಿ ಟಿ20 ವಿಶ್ವಕಪ್: ಇಂಗ್ಲೆಂಡ್ ಟೀಂಗೆ ಜೋಫ್ರಾ ಆರ್ಚರ್ ವಾಪಸ್‌ಲಂಡನ್: ಮುಂಬರುವ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, 14 ತಿಂಗಳ ಬಳಿಕ ವೇಗಿ ಜೋಫ್ರಾ ಆರ್ಚರ್ ತಂಡಕ್ಕೆ ಮರಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಬಹಳ ಸಮಯ ತಂಡದಿಂದ ಹೊರಗುಳಿದಿದ್ದರು. 15 ಸದಸ್ಯರ ತಂಡವನ್ನು ಜೋಸ್ ಬಟ್ಲರ್ ಮುನ್ನಡೆಸಲಿದ್ದಾರೆ. ತಂಡ: ಜೋಸ್ ಬಟ್ಲರ್ (ನಾಯಕ), ಫಿಲ್ ಸಾಲ್ಟ್, ಬೆನ್ ಡಕೆಟ್ , ವಿಲ್ ಜ್ಯಾಕ್ಸ್, ಹ್ಯಾರಿ ಬ್ರೂಕ್, ಜಾನಿ ಬೇರ್‌ಸ್ಟೋವ್, ಸ್ಯಾಮ್ ಕರ್ರನ್, ಮೋಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಟಾಮ್ ಹಾರ್ಟ್ಲಿ, ರೀಸ್ ಟಾಪ್ಲಿ.
ದ.ಆಫ್ರಿಕಾ ಟೀಂನಲ್ಲಿ 2 ಹೊಸ ಮುಖ!ಜೋಹಾನ್ಸ್‌ಬರ್ಗ್: ಐಸಿಸಿ ಟಿ20 ವಿಶ್ವಕಪ್‌ಗೆ ದ.ಆಫ್ರಿಕಾ ತಂಡ ಪ್ರಕಟಗೊಂಡಿದ್ದು, ಇನ್ನೂ ಅಂ.ರಾ. ಕ್ರಿಕೆಟ್ ಆಡದ ರ್‍ಯಾನ್ ರಿಕೆಲ್ಟನ್ ಹಾಗೂ ಓಟ್ನೀಲ್ ಬಾರ್ಟ್ಮನ್‌ಗೆ ಸ್ಥಾನ ಸಿಕ್ಕಿದೆ. ಏಡನ್ ಮಾರ್ಕ್‌ರಮ್ ಇದೇ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ತಂಡ ಮುನ್ನಡೆಸಲಿದ್ದಾರೆ. ತಂಡ: ಏಡನ್ ಮಾರ್ಕ್‌ರಮ್(ನಾಯಕ), ಕ್ವಿಂಟನ್ ಡಿ ಕಾಕ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಓಟ್ನೀಲ್ ಬಾರ್ಟ್ಮನ್, ರೀಜಾ ಹೆಂಡ್ರಿಕ್ಸ್, ಹೈನ್ರಿಕ್ ಕ್ಲಾಸೆನ್, ರ್‍ಯಾನ್ ರಿಕೆಲ್ಟನ್, ಜೆರಾಲ್ಡ್ ಕೋಟ್ಝೀ, ಕೇಶವ್ ಮಹಾರಾಜ್, ಏನ್ರಿಕ್ ನೋಕಿಯ, ತಬ್ರೇಜ್ ಶಮ್ಸಿ, ಕಗಿಸೋ ರಬಾಡ, ಮಾರ್ಕೊ ಯಾನ್ಸನ್, ಬೊರ್ನ್ ಫಾರ್ಚುನ್.