ಟಿ20 ವಿಶ್ವಕಪ್‌: ಮೇ 25ರಂದು ಭಾರತದ ಮೊದಲ ಬ್ಯಾಚ್‌ ಅಮೆರಿಕಕ್ಕೆ

| Published : May 19 2024, 01:50 AM IST / Updated: May 19 2024, 04:21 AM IST

ಟಿ20 ವಿಶ್ವಕಪ್‌: ಮೇ 25ರಂದು ಭಾರತದ ಮೊದಲ ಬ್ಯಾಚ್‌ ಅಮೆರಿಕಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ವಿಶ್ವಕಪ್‌ನಲ್ಲಿ ಆಡಲು ಮೇ 25ರಂದು ಹೊರಡಲಿದೆ ಭಾರತ ತಂಡದ ಮೊದಲ ಬ್ಯಾಚ್‌. ವಿಶ್ವಕಪ್‌ ಆರಂಭಕ್ಕೆ ಒಂದು ವಾರ ಮೊದಲೇ ಅಮೆರಿಕ ತಲುಪಲಿದ್ದಾರೆ ನಾಯಕ ರೋಹಿತ್‌ ಶರ್ಮಾ. 2ನೇ ಬ್ಯಾಚ್‌ ಮೇ 27ಕ್ಕೆ ಪ್ರಯಾಣ.

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಮೇ 25ರಂದ ಭಾರತ ತಂಡದ ಮೊದಲ ಬ್ಯಾಚ್‌ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದೆ. ಐಪಿಎಲ್‌ ಪ್ಲೇ-ಆಫ್‌ಗೇರದ ತಂಡಗಳಲ್ಲಿದ್ದ ಆಟಗಾರರು ಮೊದಲ ಬ್ಯಾಚ್‌ನಲ್ಲಿ ಪ್ರಯಾಣಿಸಲಿದ್ದಾರೆ. 

ನಾಯಕ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬೂಮ್ರಾ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಅಕ್ಷರ್‌ ಪಟೇಲ್‌, ಅರ್ಶ್‌ದೀಪ್‌ ಸಿಂಗ್‌ ಹಾಗೂ ಕೋಚ್‌ಗಳಾದ ರಾಹುಲ್‌ ದ್ರಾವಿಡ್‌, ಪರಾಸ್‌ ಮ್ಹಾಂಬ್ರೆ, ವಿಕ್ರಮ್‌ ರಾಥೋಡ್‌ ಸೇರಿ ಇನ್ನುಳಿದ ಸಹಾಯಕ ಸಿಬ್ಬಂದಿ ಮೇ 25ರಂದೇ ಅಮೆರಿಕಕ್ಕೆ ತೆರಳಲಿದ್ದಾರೆ. 

ಐಪಿಎಲ್‌ ಪ್ಲೇ-ಆಫ್‌ನಲ್ಲಿ ಆಡುವ ತಂಡಗಳಲ್ಲಿರುವ ಉಳಿದ ಆಟಗಾರರು ಟೂರ್ನಿ ಕೊನೆಗೊಂಡ ಬಳಿಕ ಅಂದರೆ ಮೇ 27ರಂದು ಅಮೆರಿಕಕ್ಕೆ ವಿಮಾನ ಹತ್ತಲಿದ್ದಾರೆ. ಭಾರತ ಜೂ.1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವಾಡಲಿದ್ದು, ಜೂ.5ರಂದು ಐರ್ಲೆಂಡ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಜೂ.9ಕ್ಕೆ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.