ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ನೂತನ ಟಿ20 ಜೆರ್ಸಿ ಅನಾವರಣ

| Published : May 08 2024, 01:05 AM IST

ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ನೂತನ ಟಿ20 ಜೆರ್ಸಿ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ತಂಡದ ಹೊಸ ಜೆರ್ಸಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯ ಭುಜದ ಮೇಲೆ ಬಿಳಿ ಬಣ್ಣದ ಮೂರು ಪಟ್ಟಿಗಳಿವೆ. ಜೆರ್ಸಿ ಕುತ್ತಿಗೆ ಭಾಗದಲ್ಲಿ ತ್ರಿವರ್ಣ ಪಟ್ಟಿ ಇದೆ.

ನವದೆಹಲಿ: ಜೂ.1ರಿಂದ ಆರಂಭಗೊಳ್ಳಲಿರುವ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಟಿ20 ಕ್ರಿಕೆಟ್‌ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಭಾರತ ತಂಡದ ಕಿಟ್‌ ಪ್ರಾಯೋಜಕತ್ವ ಪಡೆದಿರುವ ಅಡಿಡಾಸ್‌ ಸಂಸ್ಥೆಯು ಟ್ವೀಟರ್‌ನಲ್ಲಿ ಜೆರ್ಸಿಯನ್ನು ಬಿಡುಗಡೆಗೊಳಿಸಿದೆ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಮೊಹಮದ್‌ ಸಿರಾಜ್‌, ಕುಲ್ದೀಪ್‌ ಯಾದವ್‌, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ ಸೇರಿದಂತೆ ಪ್ರಮುಖ ಆಟಗಾರರು ಹೊಸ ಜೆರ್ಸಿ ಧರಿಸಿರುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯ ಭುಜದ ಮೇಲೆ ಬಿಳಿ ಬಣ್ಣದ ಮೂರು ಪಟ್ಟಿಗಳಿವೆ. ಜೆರ್ಸಿ ಕುತ್ತಿಗೆ ಭಾಗದಲ್ಲಿ ತ್ರಿವರ್ಣ ಪಟ್ಟಿ ಇದೆ. ಭಾರತ ತಂಡದ ಹೊಸ ಜೆರ್ಸಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ನೂತನ ಜೆರ್ಸಿಯ ಬಗ್ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಜರ್ಸಿಯನ್ನು ಅತ್ಯುತ್ತಮ ಎಂದು ಬಣ್ಣಿಸಿದರೆ, ಕೆಲವರು ಜೆರ್ಸಿ ಇಷ್ಟವಾಗಿಲ್ಲ ಎಂದಿದ್ದಾರೆ.ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಜೂನ್ 9ರಂದು ಹೈವೋಲ್ಟೇಜ್ ಕದನದಲ್ಲಿ ಸೆಣಸಲಿದೆ. ನಂತರ ಕ್ರಮವಾಗಿ ಅಮೆರಿಕ ಹಾಗೂ ಕೆನಡಾ ವಿರುದ್ಧ ಜೂನ್ 12 ಮತ್ತು 15 ರಂದು ಗುಂಪು ಹಂತದ ಪಂದ್ಯಗಳನ್ನು ಆಡಲಿದೆ.