ಟೆನಿಸ್‌ ವಿಶ್ವ ರ್‍ಯಾಂಕಿಂಗ್‌: ಅಗ್ರ 100ರಿಂದ ಹೊರಬಿದ್ದ ನಗಾಲ್‌

| Published : Feb 22 2024, 01:50 AM IST

ಟೆನಿಸ್‌ ವಿಶ್ವ ರ್‍ಯಾಂಕಿಂಗ್‌: ಅಗ್ರ 100ರಿಂದ ಹೊರಬಿದ್ದ ನಗಾಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಟಿಪಿ ರ್‍ಯಾಂಕಿಂಗ್‌ನಲ್ಲಿ 3 ಸ್ಥಾನ ಕುಸಿತ ಕಂಡಿರುವ ಭಾರತದ ತಾರಾ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಸಿಂಗಲ್ಸ್‌ ಅಗ್ರ 100ರಿಂದ ಹೊರಬಿದ್ದಿದ್ದು, ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಅಗ್ರ ಸ್ಥಾನದಲ್ಲೇ ಮುಂದುರಿದಿದ್ದಾರೆ.

ನವದೆಹಲಿ: ಎಟಿಪಿ ರ್‍ಯಾಂಕಿಂಗ್‌ನಲ್ಲಿ 3 ಸ್ಥಾನ ಕುಸಿತ ಕಂಡಿರುವ ಭಾರತದ ತಾರಾ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಸಿಂಗಲ್ಸ್‌ ಅಗ್ರ 100ರಿಂದ ಹೊರಬಿದ್ದಿದ್ದು, ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಅಗ್ರ ಸ್ಥಾನದಲ್ಲೇ ಮುಂದುರಿದಿದ್ದಾರೆ. 16 ಎಟಿಪಿ ಅಂಕಗಳನ್ನು ಕಳೆದುಕೊಂಡಿರುವ ನಗಾಲ್‌ ಸದ್ಯ 101 ಸ್ಥಾನದಲ್ಲಿದ್ದಾರೆ. ಚೆನೈ ಓಪನ್‌ ಚಾಲೆಂಜರ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ ಅಗ್ರ 100ರೊಳಗೆ ಸ್ಥಾನ ಪಡೆದ ಕೆಲವೇ ಭಾರತೀಯರ ಸಾಲಿಗೆ ನಗಾಲ್‌ ಸೇರ್ಪಡೆಗೊಂಡಿದ್ದರು. ಆದರೆ ಕಳೆದ ವಾರ ಬೆಂಗಳೂರು ಓಪನ್‌ ಸೆಮಿಫೈನಲ್‌ನಲ್ಲಿ ಸೋತ ಕಾರಣ, ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದಿದ್ದಾರೆ.

ಇನ್ನುಳಿದಂತೆ 42 ಸ್ಥಾನ ಏರಿಕೆ ಕಂಡಿರುವ ರಾಮ್‌ಕುಮಾರ್‌ ರಾಮನಾಥನ್‌ 420ನೇ ಸ್ಥಾನದಲ್ಲಿದ್ದು, ಶಶಿಕುಮಾರ್‌ ಮುಕುಂದ 457, ಎಸ್‌.ಡಿ. ಪ್ರಜ್ವಲ್‌ ದೇವ್‌ 595 ಮತ್ತು ಪ್ರತಾಪ್‌ ಸಿಂಗ್‌ 623ನೇ ಸ್ಥಾನದಲ್ಲಿದ್ದಾರೆ. ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ 60, ಎನ್ ಶ್ರೀರಾಮ್ ಬಾಲಾಜಿ 80, ವಿಜಯ್ ಸುಂದರ್ ಪ್ರಶಾಂತ್ 81, ಸಾಕೇತ್ ಮೈನೇನಿ 89 ಮತ್ತು ಅನಿರುಧ್‌ ಚಂದ್ರಶೇಖರ್ 94 ಸ್ಥಾನದಲ್ಲಿದ್ದಾರೆ