ಥಾಯ್ಲೆಂಡ್‌ ಮಾಸ್ಟರ್ಸ್‌: ಶ್ರೀಕಾಂತ್‌ ಶುಭಾರಂಭ

| Published : Feb 01 2024, 02:04 AM IST

ಸಾರಾಂಶ

ಥಾಯ್ಲೆಂಡ್‌ ಮಾಸ್ಟರ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಮಿಥುನ್‌ ಮಂಜುನಾಥ್‌ ಶುಭಾರಂಭ ಮಾಡಿದ್ದಾರೆ.

ಬ್ಯಾಂಕಾಂಕ್‌: ಥಾಯ್ಲೆಂಡ್‌ ಮಾಸ್ಟರ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಮಿಥುನ್‌ ಮಂಜುನಾಥ್‌ ಶುಭಾರಂಭ ಮಾಡಿದ್ದಾರೆ.

ಬುಧವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌ ಚೈನೀಸ್‌ ತೈಪೆಯ ವಾಂಗ್‌ ತ್ಸು ವೆಯ್‌ ವಿರುದ್ಧ 22-20, 21-19ರಿಂದ ಗೆದ್ದು ಮೂಲಕ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮಿಥುನ್ ಮಂಜುನಾಥ್ ಹಾಂಕಾಂಗ್‌ನ ಜೇಸನ್ ಗುಣವಾನ್ ಅವರನ್ನು 21-17, 21-8 ರಿಂದ ಸೋಲಿಸಿದರು. 2ನೇ ಸುತ್ತಿನಲ್ಲಿ ಮಿಥುನ್‌-ಶ್ರೀಕಾಂತ್‌ ಮುಖಾಮುಖಿಯಾಗಲಿದ್ದಾರೆ. ಶಂಕರ್‌ ಸುಬ್ರಹ್ಮಣ್ಯನ್‌ ಕೂಡಾ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದ್ದು, ಸಮೀರ್‌ ವರ್ಮಾ, ಕಿರಣ್‌ ಜಾರ್ಜ್ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ, ಆಶ್ಮಿತಾ ಛಲಿಹಾ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.