ಥಾಯ್ಲೆಂಡ್‌ ಮಾಸ್ಟರ್ಸ್‌: ಶ್ರೀಕಾಂತ್‌ ಹೊರಕ್ಕೆ, ಮಿಥುನ್‌ ಕ್ವಾರ್ಟರ್‌ಗೆ

| Published : Feb 02 2024, 01:00 AM IST

ಸಾರಾಂಶ

ಥಾಯ್ಲೆಂಡ್‌ ಮಾಸ್ಟರ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ, ಮಾಜಿ ವಿಶ್ವ ನಂ.1 ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಸೋತು ಹೊರಬಿದ್ದಿದ್ದಾರೆ. ಗುರುವಾರ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಅವರು ಕರ್ನಾಟಕದ ಮಿಥುನ್ ಮಂಜುನಾಥ್‌ ವಿರುದ್ಧ 9-21, 21-12, 17-21ರಲ್ಲಿ ಸೋಲನುಭವಿಸಿದರು.

ಬ್ಯಾಂಕಾಕ್‌: ಥಾಯ್ಲೆಂಡ್‌ ಮಾಸ್ಟರ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ, ಮಾಜಿ ವಿಶ್ವ ನಂ.1 ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಸೋತು ಹೊರಬಿದ್ದಿದ್ದಾರೆ. ಗುರುವಾರ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಅವರು ಕರ್ನಾಟಕದ ಮಿಥುನ್ ಮಂಜುನಾಥ್‌ ವಿರುದ್ಧ 9-21, 21-12, 17-21ರಲ್ಲಿ ಸೋಲನುಭವಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಛಲಿಹಾ ಕೂಡಾ ಕ್ವಾರ್ಟರ್‌ಗೇರಿದರು. ಆದರೆ ಶಂಕರ್‌ ಸುಬ್ರಹ್ಮಣ್ಯನ್‌, ಮಾಳವಿಕಾ ಅಭಿಯಾನ ಅಂತ್ಯಗೊಳಿಸಿದ್ದಾರೆ. ಇನ್ನು, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಕ್ವಾರ್ಟರ್‌ಗೇರಿದರು. ಅವರು 2ನೇ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೋ ವಿರುದ್ಧ 21-15, 24-22 ಅಂತರದಲ್ಲಿ ಜಯಭೇರಿ ಬಾರಿಸಿದರು.

3ನೇ ಅನಧಿಕೃತ ಟೆಸ್ಟ್‌:ಭಾರತ ‘ಎ’ 192/10ಅಹ್ಮದಾಬಾದ್‌: ಇಲ್ಲಿ ಗುರುವಾರ ಆರಂಭಗೊಂಡ 3ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 192ಕ್ಕೆ ಆಲೌಟಾಗಿದೆ. ದೇವದತ್‌ ಪಡಿಕ್ಕಲ್‌(65), ಸರಣ್‌ಶಾ ಜೈನ್‌(64) ಅರ್ಧಶತಕ ಗಳಿಸಿ ಭಾಋತಕ್ಕೆ ಆಸರೆಯಾದರು. ಮ್ಯಾಥ್ಯೂ ಪಾಟ್ಸ್‌ 6, ಬ್ರೇಡನ್‌ ಕಾರ್ಸ್‌ 4 ವಿಕೆಟ್‌ ಕಬಳಿಸಿದರು. ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ಲಯನ್ಸ್‌ ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 98 ರನ್‌ ಗಳಿಸಿದೆ.