ಸಾರಾಂಶ
ಬಿಸಿಸಿಐ, ಐಸಿಸಿ ಹಾಗೂ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ನಡುವೆ ಭಾರೀ ತಿಕ್ಕಾಟಕ್ಕೆ ಕಾರಣವಾಗಿದ್ದ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಬುಧವಾರ(ಫೆ.19) ಚಾಲನೆ ಸಿಗಲಿದೆ.
ದುಬೈ: ಬಿಸಿಸಿಐ, ಐಸಿಸಿ ಹಾಗೂ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ನಡುವೆ ಭಾರೀ ತಿಕ್ಕಾಟಕ್ಕೆ ಕಾರಣವಾಗಿದ್ದ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಬುಧವಾರ(ಫೆ.19) ಚಾಲನೆ ಸಿಗಲಿದೆ.
ಈ ಬಾರಿ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಪಾಕ್‌ನ ಕರಾಚಿ, ರಾವಲ್ಪಿಂಡಿ ಹಾಗೂ ಲಾಹೋರ್, ಯುಎಇಯ ದುಬೈ ಕ್ರೀಡಾಂಗಣಗಳಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಇತರೆಲ್ಲಾ ಪಂದ್ಯಗಳು ಪಾಕ್‌ನಲ್ಲಿ ಆಯೋಜನೆಗೊಳ್ಳಲಿವೆ.
ಉದ್ಘಾಟನಾ ಪಂದ್ಯದಲ್ಲಿ ಬುಧವಾರ ಹಾಲಿ ಚಾಂಪಿಯನ್ ಪಾಕಿಸ್ತಾನ ಹಾಗೂ ಮಾಜಿ ಚಾಂಪಿಯನ್ ನ್ಯೂಜಿಲೆಂಡ್ ಸೆಣಸಾಡಲಿವೆ. 2013ರ ಚಾಂಪಿಯನ್ ಭಾರತ ತಂಡ ಗುರುವಾರ ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಟೂರ್ನಿ ಮಾದರಿ ಹೇಗೆ?: ಟೂರ್ನಿಯಲ್ಲಿರುವ 8 ತಂಡಗಳನ್ನು ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡ ಗುಂಪು ಹಂತದಲ್ಲಿ ಇತರ ತಂಡಗಳ ವಿರುದ್ಧ 1 ಬಾರಿ ಸೆಣಸಾಡಲಿವೆ. ಅಂದರೆ, ಪ್ರತಿ ತಂಡಕ್ಕೆ 3 ಪಂದ್ಯಗಳಿರಲಿವೆ. ಗುಂಪು ಹಂತದಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಅಲ್ಲಿ ಗೆಲ್ಲುವ ತಂಡಗಳು ಫೈನಲ್‌ಗೇರಲಿವೆ.
ಭಾರತ ಫೈನಲ್‌ಗೇರಿದ್ರೆ ಪಂದ್ಯ ಲಾಹೋರ್‌ನಿಂದ ದುಬೈಗೆ ಶಿಫ್ಟ್
ಭಾರತ ಟೂರ್ನಿಯಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ದುಬೈ ಕ್ರೀಡಾಂಗಣದಲ್ಲಿ ಆಡಲಿದೆ. ಇತರೆಲ್ಲಾ ತಂಡಗಳ ಪಂದ್ಯಗಳು ಪಾಕ್‌ನ ಕ್ರೀಡಾಂಗಣಗಳಲ್ಲಿ ನಿಗದಿಯಾಗಿದೆ. ಸೆಮಿಫೈನಲ್ ಪಂದ್ಯಗಳಿಗೆ ದುಬೈ, ಲಾಹೋರ್ ಆತಿಥ್ಯ ವಹಿಸಲಿದೆ. ಭಾರತ ಸೆಮಿಫೈನಲ್‌ಗೇರಿದರೆ ಆ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಮತ್ತೊಂದು ಸೆಮಿಫೈನಲ್ ಲಾಹೋರ್‌ನಲ್ಲಿ ನಡೆಯಲಿದೆ. ಇನ್ನು, ಭಾರತ ಫೈನಲ್‌ಗೇರಿದರೆ ಪಂದ್ಯ ಲಾಹೋರ್‌ನಿಂದ ದುಬೈಗೆ ಸ್ಥಳಾಂತರಗೊಳ್ಳಲಿದೆ. ಭಾರತ ಹೊರತುಪಡಿಸಿ ಇತರ ತಂಡಗಳು ಫೈನಲ್‌ಗೇರಿದರೆ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ.
‘ಎ’ ಗುಂಪು
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ
‘ಬಿ ಗುಂಪು
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ
ಆತಿಥ್ಯ ಕ್ರೀಡಾಂಗಣಗಳಿವು
ಕ್ರೀಡಾಂಗಣ ಆಸನ ಸಾಮರ್ಥ್ಯ ಪಂದ್ಯಗಳು
ಕರಾಚಿ 30000 3
ಲಾಹೋರ್ 34000 5
ರಾವಲ್ಪಿಂಡಿ 20000 3
ದುಬೈ 25000 5
₹19.4 ಕೋಟಿ
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ ₹19.4 ಕೋಟಿ ನಗದು ಬಹುಮಾನ ಸಿಗಲಿದೆ.
₹9.72 ಕೋಟಿ
ಈ ಬಾರಿ ರನ್ನರ್-ಅಪ್ ತಂಡ ₹9.72 ಕೋಟಿ ಮೊತ್ತ ತನ್ನದಾಗಿಸಿಕೊಳ್ಳಲಿದೆ.