ಸಾರಾಂಶ
ಭಾರತೀಯ ಕ್ರಿಕೆಟ್‌ನಲ್ಲಿ ವಯೋ ವಂಚನೆ ತಡೆಗಟ್ಟಲು ಬಿಸಿಸಿಐ ಹೊಸ ವಿಧಾನಕ್ಕೆ ಕೈಹಾಕುತ್ತಿದೆ. ಇಷ್ಟು ದಿನ ತನ್ನಲ್ಲಿರುವ ಸಂಪನ್ಮೂಲ ಬಳಸಿಕೊಂಡು ವಯೋ ವಂಚಕರನ್ನು ಪತ್ತೆ ಹಚ್ಚುತ್ತಿದ್ದ ಬಿಸಿಸಿಐ, ಈ ಬಾರಿ ಖಾಸಗಿ ಸಂಸ್ಥೆಯ ನೆರವು ಪಡೆಯಲು ನಿರ್ಧರಿಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ.
ಮುಂಬೈ: ಭಾರತೀಯ ಕ್ರಿಕೆಟ್‌ನಲ್ಲಿ ವಯೋ ವಂಚನೆ ತಡೆಗಟ್ಟಲು ಬಿಸಿಸಿಐ ಹೊಸ ವಿಧಾನಕ್ಕೆ ಕೈಹಾಕುತ್ತಿದೆ. ಇಷ್ಟು ದಿನ ತನ್ನಲ್ಲಿರುವ ಸಂಪನ್ಮೂಲ ಬಳಸಿಕೊಂಡು ವಯೋ ವಂಚಕರನ್ನು ಪತ್ತೆ ಹಚ್ಚುತ್ತಿದ್ದ ಬಿಸಿಸಿಐ, ಈ ಬಾರಿ ಖಾಸಗಿ ಸಂಸ್ಥೆಯ ನೆರವು ಪಡೆಯಲು ನಿರ್ಧರಿಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ-ಆಗಸ್ಟ್‌ನಲ್ಲಿ ಬಿಸಿಸಿಐ, ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿನ ಅಂಡರ್-16 ಬಾಲಕರು, ಅಂಡರ್-15 ಬಾಲಕಿಯರ ವಯಸ್ಸು ಪರಿಶೀಲನೆ ನಡೆಸಲಿದೆ. ಪ್ರತಿ ರಾಜ್ಯದ ಅಂದಾಜು 50-60 ಆಟಗಾರರನ್ನು ಎರಡು ವಿಧದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆಟಗಾರರ ದಾಖಲೆಗಳ ಪರಿಶೀಲನೆ ಹಾಗೂ ಬೋನ್ ಟೆಸ್ಟ್ ಮೂಲಕ ವಯಸ್ಸು ಪರಿಶೀಲನೆ ನಡೆಯಲಿದೆ. ಈ ಬಾರಿ ಖಾಸಗಿ ಸಂಸ್ಥೆಯ ನೆರವಿನಿಂದ ಆಧುನಿಕ ತಂತ್ರಜ್ಞಾನ ಬಳಸಲು ಬಿಸಿಸಿಐ ಇಚ್ಛಿಸಿದೆ.