ಸಾರಾಂಶ
ನವದೆಹಲಿ: ಭಾರತ ಫುಟ್ಬಾಲ್ ತಂಡದ ಕೋಚ್ ಸ್ಥಾನದಿಂದ ಉಚ್ಚಾಟನೆಗೊಂಡಿರುವ ಇಗೊರ್ ಸ್ಟಿಮಾಕ್, ಮತ್ತೊಮ್ಮೆ ಭಾರತೀಯ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. ಆದರೆ ಫುಟ್ಬಾಲ್ ಬೆಳೆಯದ ಏಕೈಕ ದೇಶ ಭಾರತ ಎಂದು ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ‘ಸಾಕಷ್ಟು ಬೆಂಬಲವಿಲ್ಲದೇ ಕೋಚ್ ಆಗಿ ಮುಂದುವರಿಯುವುದು ಅಸಾಧ್ಯವಾಗಿತ್ತು. ನಾನು ಸುಳ್ಳುಗಳಿಂದ ಬೇಸತ್ತಿದ್ದೇನೆ. ತಮ್ಮ ಹಿತಾಸಕ್ತಿ ಮಾತ್ರ ನೋಡುವ ಜನರೇ ಎಐಎಫ್‌ಎಫ್‌ನಲ್ಲಿದ್ದಾರೆ. ಕಲ್ಯಾಣ್ ಚೌಬೆ ಅಧ್ಯಕ್ಷ ಸ್ಥಾನ ತೊರೆದರೆ ಭಾರತದ ಫುಟ್ಬಾಲ್ ಉನ್ನತಿಗೇರಲಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫಿಫಾ ರ್‍ಯಾಂಕಿಂಗ್: 124ನೇ ಸ್ಥಾನಕ್ಕೆ ಕುಸಿದ ಭಾರತ
ನವದೆಹಲಿ: 2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಭಾರತ ತಂಡ ವಿಶ್ವ ರ್‍ಯಾಂಕಿಂಗ್‌ನಲ್ಲಿ 124ನೇ ಸ್ಥಾನಕ್ಕೆ ಕುಸಿದಿದೆ.ಇದು 2017ರ ಬಳಿಕ ಅತ್ಯಂತ ಕಳಪೆ ಸಾಧನೆ.
ಆಗ ಭಾರತ 132ನೇ ಸ್ಥಾನದಲ್ಲಿತ್ತು. ಆ ಬಳಿಕ ಉತ್ತಮ ಪ್ರದರ್ಶನ ತೋರಿದ್ದ ತಂಡ ಕಳೆದ ವರ್ಷ ಅಗ್ರ-100ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು. ಆದರೆ ಡಿಸೆಂಬರ್ ಬಳಿಕ ರ್‍ಯಾಂಕಿಂಗ್‌ನಲ್ಲಿ ಕುಸಿಯುತ್ತಲೇ ಬಂದಿದೆ. ಈ ಬಾರಿ ನೂತನ ಪಟ್ಟಿಯಲ್ಲಿ 3 ಸ್ಥಾನ ಕಳೆದುಕೊಂಡಿದ್ದು, ಏಷ್ಯಾದ ತಂಡಗಳ ಪೈಕಿ ಸದ್ಯ 22ನೇ ಸ್ಥಾನದಲ್ಲಿದೆ.